ದೇಶ

ಹರ್ಯಾಣದ ಮನುಷಿ ಫೆಮಿನಾ ಮಿಸ್ ಇಂಡಿಯಾ 2017 ನೇ ಸಾಲಿನ ವಿಜೇತೆ

ಹರ್ಯಾಣದ ಮಾನುಷಿ ಛಿಲ್ಲರ್ 2017 ನೇ ಸಾಲಿನ ಮಿಸ್‌ ಇಂಡಿಯಾ ವರ್ಲ್ಡ್‌ ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. ಜಮ್ಮು-ಕಾಶ್ಮೀರದ ಸಾನಾ ದುವಾ ಮೊದಲ ರನ್ನರ್ ಅಪ್ ಆಗಿದ್ದರೆ, ಎರಡನೇ ರನ್ನರ್ ಅಪ್ ಸ್ಥಾನವನ್ನು...

ಹರ್ಯಾಣದ ಮನುಷಿ ಫೆಮಿನಾ ಮಿಸ್ ಇಂಡಿಯಾ 2017 ನೇ ಸಾಲಿನ ವಿಜೇತೆ
ಫೆಮಿನಾ ಮಿಸ್ ಇಂಡಿಯಾ 2017 ವಿಜೆತೆ ಮನುಷಿ ಛಿಲ್ಲರ್
Published On :
ಮುಂಬೈ: ಹರ್ಯಾಣದ  ಮನುಷಿ ಛಿಲ್ಲರ್ 2017 ನೇ ಸಾಲಿನ ಮಿಸ್‌ ಇಂಡಿಯಾ ವರ್ಲ್ಡ್‌ ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. ಜಮ್ಮು-ಕಾಶ್ಮೀರದ ಸಾನಾ ದುವಾ ಮೊದಲ ರನ್ನರ್ ಅಪ್ ಆಗಿದ್ದರೆ, ಎರಡನೇ ರನ್ನರ್ ಅಪ್ ಸ್ಥಾನವನ್ನು ಬಿಹಾರ ಮೂಲದ ಪ್ರಿಯಾಂಕ ಕುಮಾರಿ ಪಡೆದಿದ್ದಾರೆ. 
ಮುಂಬೈ ನ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಸ್‌ ಇಂಡಿಯಾ ವರ್ಲ್ಡ್‌ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ. ವೈದ್ಯ ದಂಪತಿಗಳ ಪುತ್ರಿಯಾಗಿರುವ ಮನುಷಿ, " ಜೀವನದಲ್ಲಿ ಅನಿಶ್ಚಿತತೆ ಮಾತ್ರ ನಿಶ್ಚಿತ ಎಂದು ನಂಬಿದ್ದೇನೆ, ಹಾಗೂ ಉತ್ತಮ ಪ್ರದರ್ಶನದಿಂದಲೇ ಜೀವನದ ಜೀವನದ ಅದ್ಭುತವಾಗುತ್ತದೆ ಎಂದು ಹೇಳಿದ್ದಾರೆ. 
ಮಿಸ್ ಆಕ್ಟೀವ್ ಪ್ರಶಸ್ತಿಯನ್ನು ವೀನಾಲಿ ಭಟ್ನಾಗರ್ ಅವರು ಪಡೆದಿದ್ದರೆ, ವಮಿಕ ನಿಧಿ ಬಾಡಿ ಬ್ಯೂಟಿಫುಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಹೊರ ಫಾರ್ಮೆಟ್ ಇದ್ದ ಕಾರಣ ಮಿಸ್‌ ಇಂಡಿಯಾ ವರ್ಲ್ಡ್‌ ಸ್ಪರ್ಧೆಯ ರ್ಪದರ್ಶನ 30 ರಾಜ್ಯಗಳಲ್ಲಿ ನಡೆದಿದೆ. ಪ್ರದರ್ಶನದಲ್ಲಿ ಅರುಣಾಚಲ ಪ್ರದೇಶ, ತ್ರಿಪುರ, ಉತ್ತರಾಖಂದ್, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಿಂದ ಯುವತಿಯರು ಭಾಗವಹಿಸಿದ್ದರು. ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸುವವರನ್ನು  ಮಿಸ್‌ ಇಂಡಿಯಾ ವರ್ಲ್ಡ್‌ ಸ್ಪರ್ಧೆಯಲ್ಲಿ ಆಯ್ಕೆ ಮಾಡಲಾಗುತ್ತದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.