ದೇಶ

ಕುಖ್ಯಾತ ಗ್ಯಾಂಗ್ ಸ್ಟರ್ ಆನಂದ್ ಪಾಲ್ ಸಿಂಗ್ ಎನ್‌ಕೌಂಟರ್‌

ಕುಖ್ಯಾತ ಗ್ಯಾಂಗ್ ಸ್ಟರ್ ಆನಂದ್ ಪಾಲ್ ಸಿಂಗ್ ನನ್ನು ಜೈಪುರ ಪೊಲೀಸರು ಎನ್‌ಕೌಂಟರ್‌ ನಲ್ಲಿ ಹತ್ಯೆ ಮಾಡಿದ್ದಾರೆ...

ಕುಖ್ಯಾತ ಗ್ಯಾಂಗ್ ಸ್ಟರ್ ಆನಂದ್ ಪಾಲ್ ಸಿಂಗ್ ಎನ್‌ಕೌಂಟರ್‌
ಆನಂದ್ ಪಾಲ್ ಸಿಂಗ್
Published On :
ಜೈಪುರ: ಕುಖ್ಯಾತ ಗ್ಯಾಂಗ್ ಸ್ಟರ್ ಆನಂದ್ ಪಾಲ್ ಸಿಂಗ್ ನನ್ನು ಜೈಪುರ ಪೊಲೀಸರು ಎನ್‌ಕೌಂಟರ್‌ ನಲ್ಲಿ ಹತ್ಯೆ ಮಾಡಿದ್ದಾರೆ. 
ಆನಂದ್ ಪಾಲ್ ಸಿಂಗ್ ಚುರು ಸೇರಿದಂತೆ ಹಲವು ಕಡೆ ನಡೆದ 24ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದು ಇಂದು ರಾಜಸ್ತಾನದ ಚುರು ಜಿಲ್ಲೆಯಲ್ಲಿ ಎನ್‌ಕೌಂಟರ್‌ ಮಾಡಿದ್ದಾರೆ. 
ಕೊಲೆ ಪ್ರಕರಣ ಸಂಬಂಧ 2015ರಲ್ಲೇ ಈತನನ್ನು ಪೊಲೀಸರು ಬಂಧಿಸಿದ್ದರು. ಅದೇ ವರ್ಷ ಸೆಪ್ಟೆಂಬರ್ ನಲ್ಲಿ ಅಜ್ಮೇರ್ ಜೈಲಿನಿಂದ ತಪ್ಪಿಸಿಕೊಂಡಿದ್ದ. 
ಪಾಲ್ ಇತ್ತೀಚೆಗೆ ತನ್ನ ಸಹೋದರ ರುಪೇಂದ್ರ ಪಾಲ್ ಹಾಗೂ ಆತನ ಸಹಚರ ದೇವೇಂದ್ರ ಎಂಬಾತನೊಂದಿಗೆ ಚಾಟಿಂಗ್ ಮಾಡಿದ್ದು ಆತನನ್ನು ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಯಿತು.
ಆನಂದ್ ಪಾಲ್ ತಲೆಗೆ 5 ಲಕ್ಷ, ರುಪೇಂದ್ರ ಪಾಲ್ ಹಾಗೂ ಆತನ ಸಹಚರ ದೇವೇಂದ್ರ ತಲೆಗೆ 1 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.