ದೇಶ

ಕೋಲ್ಕತಾ: ದೇಶದ ಮೊದಲ ನೀರಿನಾಳದ ಮೆಟ್ರೋ ಸುರಂಗ ಮಾರ್ಗ ಪೂರ್ಣ

ರಾಷ್ಟ್ರದಲ್ಲೇ ಮೊದಲು ಮೆಟ್ರೋ ಸೇವೆ ಪಡೆದ ನಗರ ಎಂಬ ಖ್ಯಾತಿ ಪಡೆದಿದ್ದ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದ್ದು, ನೀರಿನಾಳದ ಮೆಟ್ರೋ ರೈಲು ಮಾರ್ಗ ಹೊಂದಿದ ಮೊದಲ ನಗರ ಎಂಬ ಖ್ಯಾತಿ ಗಳಿಸಿದೆ.

ಕೋಲ್ಕತಾ: ದೇಶದ ಮೊದಲ ನೀರಿನಾಳದ ಮೆಟ್ರೋ ಸುರಂಗ ಮಾರ್ಗ ಪೂರ್ಣ
ಹೂಗ್ಲಿ ನದಿಯಲ್ಲಿ ಮೆಟ್ರೋ ಸುರಂಗ ಮಾರ್ಗ
Published On :

ಕೋಲ್ಕತ್ತಾ: ರಾಷ್ಟ್ರದಲ್ಲೇ ಮೊದಲು ಮೆಟ್ರೋ ಸೇವೆ ಪಡೆದ ನಗರ ಎಂಬ ಖ್ಯಾತಿ ಪಡೆದಿದ್ದ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದ್ದು, ನೀರಿನಾಳದ ಮೆಟ್ರೋ ರೈಲು ಮಾರ್ಗ  ಹೊಂದಿದ ಮೊದಲ ನಗರ ಎಂಬ ಖ್ಯಾತಿ ಗಳಿಸಿದೆ.

ಮೆಟ್ರೋ ಸಂಚಾರಕ್ಕಾಗಿ ನೀರಿನಡಿ ಯಲ್ಲಿ ಸುರಂಗ ಮಾರ್ಗ ಹೊಂದಿದ ಮೊದಲ ನಗರವಾಗಿ ಕೋಲ್ಕತ್ತಾ ಹೊರಹೊಮ್ಮಿದ್ದು, ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಮತ್ತು ಹೌರಾ ನಗರಗಳ ನಡುವಿನ ಮೆಟ್ರೋ ರೈಲು  ಸಂಪರ್ಕಕ್ಕಾಗಿ ಹೂಗ್ಲಿ ನದಿಯಲ್ಲಿ ಕೈಗೊಳ್ಳಲಾಗಿದ್ದ ಸುರಂಗ ಮಾರ್ಗ ನಿರ್ಮಾಣ ಶುಕ್ರವಾರ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು  9 ಸಾವಿರ ಕೋಟಿ ರು. ವೆಚ್ಚದಲ್ಲಿ 16.4 ಕಿ.ಮೀ ಸುರಂಗ ಮಾರ್ಗ  ಕೊರೆಯಲಾಗಿದ್ದು, ನೀರಿನಡಿಯ ಎರಡು ಸುರಂಗ ಮಾರ್ಗಗಳು 13 ಮೀಟರ್‌ ನೀರಿನ ಕೆಳಗೆ ಮತ್ತು ಭುವಿಯಿಂದ 30 ಮೀಟರ್‌ ಕೆಳಗಿವೆ ಎಂದು ತಿಳಿದುಬಂದಿದೆ.

ಸಾಲ್ಟ್‌ ಲೇಕ್‌ ಮತ್ತು ಫುಲ್‌ ಬಾಗನ್‌ ನಡುವಿನ ಮೊದಲ ಹಂತದ ಮೆಟ್ರೊ ಸಂಚಾರವು ಮುಂದಿನ ವರ್ಷ ಕಾರ್ಯಾರಂಭ ಮಾಡಲಿದ್ದು, ದೂರದ ನಗರಗಳ ಸಂಪರ್ಕಕ್ಕಾಗಿ ಬಹು ಮುಖ್ಯವಾದ ಈ ಸುರಂಗ ಮಾರ್ಗ ಕಾಮಗಾರಿಯನ್ನು  ಕೋಲ್ಕತ್ತಾ ಮೆಟ್ರೋ ರೈಲು ನಿಗಮ ಕೈಗೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.