ದೇಶ

ಈದ್ ಆಚರಣೆ ಹಿನ್ನೆಲೆ ಮಸೀದಿಗೆ ತ್ರಿವರ್ಣ ಧ್ವಜದ ದೀಪಾಲಂಕಾರ

ಪವಿತ್ರ ಮಾಸವಾದ ರಂಜಾನ್ ಮುಗಿಸಿ ಇನ್ನೇರಡು ದಿನದಲ್ಲಿ ಈದ್ ಹಬ್ಬದ ಆಚರಣೆಯಲ್ಲಿ ಮುಸ್ಲಿಂರು ತೊಡಗಿಕೊಳ್ಳಲಿದ್ದು ಈ ಮಧ್ಯೆ ರಾಜಸ್ಥಾನದ ಬಿಲ್ವಾರ ತಾಲೂಕಿನ ಮುಸ್ಲಿಂರು...

ಈದ್ ಆಚರಣೆ ಹಿನ್ನೆಲೆ ಮಸೀದಿಗೆ ತ್ರಿವರ್ಣ ಧ್ವಜದ ದೀಪಾಲಂಕಾರ
ಮಸೀದಿ
Published On :
ಪವಿತ್ರ ಮಾಸವಾದ ರಂಜಾನ್ ಮುಗಿಸಿ ಇನ್ನೇರಡು ದಿನದಲ್ಲಿ ಈದ್ ಹಬ್ಬದ ಆಚರಣೆಯಲ್ಲಿ ಮುಸ್ಲಿಂರು ತೊಡಗಿಕೊಳ್ಳಲಿದ್ದು ಈ ಮಧ್ಯೆ ರಾಜಸ್ಥಾನದ ಬಿಲ್ವಾರ ತಾಲೂಕಿನ ಮುಸ್ಲಿಂರು ವಿಶಿಷ್ಟವಾಗಿ ಮಸೀದಿಗೆ ತ್ರಿವರ್ಣ ಧ್ವಜದ ವಿದ್ಯುತ್ ದೀಪಾಲಂಕಾರ ಮಾಡಿದ್ದಾರೆ. 
ಈದ್ ಆಚರಣೆ ಹಿನ್ನೆಲೆಯಲ್ಲಿ ಮಸೀದಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸುವುದು ಸಾಮಾನ್ಯವಾಗಿದೆ. ಆದರೆ ಬಿಲ್ವಾರ ಜಿಲ್ಲೆಯ ಮುಸ್ಲಿಂರು ತಮ್ಮ ಮಸೀದಿಗೆ ಹಾರಾಡುತ್ತಿರುವ ತ್ರಿವರ್ಣ ಧ್ವಜದ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. 
ಸಾಮರಸ್ಯ ಬೆಳೆಸುವ ಸಲುವಾಗಿ ನಾವು ಮಸೀದಿಗೆ ತ್ರಿವರ್ಣ ಧ್ವಜದ ದೀಪಾಲಂಕಾರ ಮಾಡಲಾಗಿದೆ ಎಂದು ಸ್ಥಳೀಯ ಮುಸ್ಲಿಂರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.