ದೇಶ

ಕೇಂದ್ರದಿಂದ 30 ಸ್ಮಾರ್ಟ್ ಸಿಟಿಗಳ ಪಟ್ಟಿ ಘೋಷಣೆ: ಬೆಂಗಳೂರು ಇನ್, ರಾಯ್ ಬರೇಲಿ ಪಟ್ಟಿಯಿಂದ ಹೊರಕ್ಕೆ!

ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಯಾಗಲಿರುವ 30 ನಗರಗಳ ಪಟ್ಟಿಯನ್ನು ಘೋಷಿಸಿದ್ದು, ಕೇರಳ ರಾಜಧಾನಿ ತಿರುವನಂತಪುರಂ, ಚತ್ತೀಸ್ ಗಢದ ನೂತನ ರಾಜಧಾನಿ ನಯಾ ರಾಯ್ ಪುರ್ ಮೊದಲ..

ಕೇಂದ್ರದಿಂದ 30 ಸ್ಮಾರ್ಟ್ ಸಿಟಿಗಳ ಪಟ್ಟಿ ಘೋಷಣೆ: ಬೆಂಗಳೂರು ಇನ್, ರಾಯ್ ಬರೇಲಿ ಪಟ್ಟಿಯಿಂದ ಹೊರಕ್ಕೆ!
ಸ್ಮಾರ್ಟ್ ಸಿಟಿ
Published On :
ನವದೆಹಲಿ: ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಯಾಗಲಿರುವ ಬೆಂಗಳೂರು ಸೇರಿದಂತೆ 30 ನಗರಗಳ ಪಟ್ಟಿಯನ್ನು ಘೋಷಿಸಿದ್ದು, ಕೇರಳ ರಾಜಧಾನಿ ತಿರುವನಂತಪುರಂ, ಚತ್ತೀಸ್ ಗಢದ ನೂತನ ರಾಜಧಾನಿ ನಯಾ ರಾಯ್ ಪುರ್ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ. 
ಜಮ್ಮು ಹಾಗೂ ಶ್ರೀನಗರಗಳೂ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿಯನ್ನು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ. ಇನ್ನು ಮೀರತ್, ಘಾಜಿಯಾಬಾದ್  ಸಹ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿವೆ. 
ಕೇಂದ್ರ ಸರ್ಕಾರ ಈ ಬಾರಿ 40 ನಗರಗಳ ಪಟ್ಟಿಯನ್ನು ಘೋಷಿಸುವ ನಿರೀಕ್ಷೆ ಇತ್ತು. ಆದರೆ ಮುಂಬೈ ಹಾಗೂ ಬಂಗಾಳ ಸ್ಮಾರ್ಟಿ ಸಿಟಿ ನಗರಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಇರುವುದು ಹಾಗೂ ಕೆಲವು ನಗರಗಳು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಇರಬೇಕಾದ ಕನಿಷ್ಠ ಅರ್ಹತೆಗಳನ್ನು ಹೊಂದಿರದ ಕಾರಣ ನಗರಗಳ ಸಂಖ್ಯೆ ಕಡಿಮೆಯಾಗಿದ್ದು, 30 ನಗರಗಳನ್ನು ಘೋಷಿಸಲಾಗಿದೆ. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸ್ಮಾರ್ಟ್ ಸಿಟಿ ನಗರಗಳ ಪಟ್ಟಿಯನ್ನು ಘೋಷಿಸಿದ್ದಾರೆ. ಈ ಮೂಲಕ ಸ್ಮಾರ್ಟ್ ಸಿಟಿ ನಗರಗಳ ಸಂಖ್ಯೆ 90 ಕ್ಕೆ ಏರಿಕೆಯಾಗಿದ್ದು, ಒಟ್ಟು  1,91,155 ಹೂಡಿಕೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.