ಹಿಂದೂ ಸಂಘಟನೆ ನಾಯಕರ ಭೇಟಿಯೊಂದು 'ಔಪಚಾರಿಕವಷ್ಟೇ': ನಟ ರಜನಿಕಾಂತ್
ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ರಾಜಕೀಯ ಪ್ರವೇಶ ಕುರಿತಂತೆ ಭಾರೀ ಕುತೂಹಲಗಳು ಮಾಡಿರುವ ಬೆನ್ನಲ್ಲೇ ರಜನಿಕಾಂತ್ ಅವರು ತಮ್ಮ ನಿವಾಸದಲ್ಲಿ ಸೋಮವಾರ ಹಿಂದೂ ಮಕ್ಕಲ್ ಕಟ್ಟಿ ಸಂಘಟನೆಯ ನಾಯಕರನ್ನು...

Published On :
ಚೆನ್ನೈ: ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ರಾಜಕೀಯ ಪ್ರವೇಶ ಕುರಿತಂತೆ ಭಾರೀ ಕುತೂಹಲಗಳು ಮಾಡಿರುವ ಬೆನ್ನಲ್ಲೇ ರಜನಿಕಾಂತ್ ಅವರು ತಮ್ಮ ನಿವಾಸದಲ್ಲಿ ಸೋಮವಾರ ಹಿಂದೂ ಮಕ್ಕಲ್ ಕಟ್ಟಿ ಸಂಘಟನೆಯ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಖಟ್ಟರ್ ಹಿಂದೂ ಸಂಘಟನೆಯಾದ ಹಿಂದೂ ಮಕ್ಕಲ್ ಕಟ್ಟಿ ಸಂಘಟನೆಯ ನಾಯಕ ಅರ್ಜುನ್ ಸಂಪತ್ ಮತ್ತು ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರನ್ನು ರಜನಿಕಾಂತ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಭೇಟಿ ಬಳಿಕ ಹೇಳಿಕೆ ನೀಡಿರುವ ಅರ್ಜುನ್ ಸಂಪತ್ ಅವರು, ರಜನಿಕಾಂತ್ ಅವರಿಗೆ ನಾವು ಬೆಂಬಲ ನೀಡುತ್ತೇವೆ. ರಾಜಕೀಯ ಪ್ರವೇಶಿಸಿ ತಮಿಳುನಾಡು ರಾಜ್ಯಕ್ಕಾಗಿ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ. ಅವರ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ತಮಿಳುನಾಡು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಏನಾದರೂ ಮಾಡಬೇಕೆಂಬ ಆಸೆ ಅವರ ಮನಸ್ಸಿನಲ್ಲಿದೆ. ರಾಜಕೀಯ ಪ್ರವೇಶ ಕುರಿತ ನಮ್ಮ ಮನವಿಯನ್ನು ಅವರ ಪರಿಗಣಿಸಿದ್ದಾರೆಂದು ಹೇಳಿದ್ದಾರೆ.
ಇದರಂತೆ ಹಿಂದೂ ನಾಯಕರ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಜನಿಕಾಂತ್ ಅವರು, ಭೇಟಿಯೊಂದು ಕೇವಲ ಔಪಚಾರಿಕವಷ್ಟೇ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ತಮಿಳುನಾಡು ರೈತರನ್ನು ಭೇಟಿ ಮಾಡಿದ್ದ ನಟ ರಜನಿಕಾಂತ್ ಅವರು ರೂ.1 ಕೋಟಿ ಸಹಾಯಧನವನ್ನು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


