ಯೋಗ ದಿನಾಚರಣೆಯೊಂದು 'ಪಬ್ಲಿಸಿಟಿ ಸ್ಟಂಟ್' ಪ್ರಚಾರದಲ್ಲಿ ಬಿಹಾರ ಸರ್ಕಾರ ಭಾಗಿಯಾಗಲ್ಲ: ನಿತೀಶ್
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯೊಂದು 'ಪಬ್ಲಿಸಿಟಿ ಸ್ಟಂಟ್' ಆಗಿದ್ದು ಇದರ ಪ್ರಚಾರ ಕಾರ್ಯದಲ್ಲಿ ಬಿಹಾರ ಸರ್ಕಾರ ಭಾಗವಹಿಸುವುದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್...

Published On :
ಪಾಟ್ನಾ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯೊಂದು 'ಪಬ್ಲಿಸಿಟಿ ಸ್ಟಂಟ್' ಆಗಿದ್ದು ಇದರ ಪ್ರಚಾರ ಕಾರ್ಯದಲ್ಲಿ ಬಿಹಾರ ಸರ್ಕಾರ ಭಾಗವಹಿಸುವುದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಯೋಗವನ್ನು ತನ್ನ ಪಬ್ಲಿಸಿಟಿ ಸ್ಟಂಟ್ ಗಾಗಿ ಬಳಸಿಕೊಳ್ಳುತ್ತಿದ್ದು ಹೀಗಾಗಿ ನಮ್ಮ ಸರ್ಕಾರ ಇದಕ್ಕೆ ಬೆಂಬಲ ನೀಡುವುದಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್ ಅವರು ಯೋಗದ ವಿರುದ್ಧವಿಲ್ಲ. ನಾನು ಯೋಗವನ್ನು ಮಾಡುತ್ತೇನೆ ಆದರೆ ಅದನ್ನು ಎಂದಿಗೂ ಪ್ರಚಾರ ವಸ್ತುವನ್ನಾಗಿ ಮಾಡಲ್ಲ. ಹೀಗಾಗಿ ಬಿಹಾರ ಸರ್ಕಾರ ಯೋಗ ದಿನಾಚರಣೆಯಂದು ಯೋಗಾಭ್ಯಾಸದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನಿತೀಶ್ ಕುಮಾರ್Nitish KumarBiharಬಿಹಾರpublicity stuntInternational Yoga Dayಅಂತಾರಾಷ್ಟ್ರೀಯ ಯೋಗ ದಿನಪಬ್ಲಿಸಿಟಿ ಸ್ಟಂಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


