ದೇಶ

ಅಮೆರಿಕ: ಕಿರ್ಪಾನ್‌ ಧರಿಸಿದ್ದಕ್ಕೆ ಸಿಖ್ ಸಮುದಾಯದ ವ್ಯಕ್ತಿಯ ಬಂಧನ

ಸಿಖ್ ಧರ್ಮದ ಧಾರ್ಮಿಕ ಭಾಗವಾಗಿರುವ ಕಿರ್ಪಾನ್ (ಸಣ್ಣ ಕತ್ತಿ) ನ್ನು ಧರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಅಮೆರಿಕ: ಕಿರ್ಪಾನ್‌ ಧರಿಸಿದ್ದಕ್ಕೆ ಸಿಖ್ ಸಮುದಾಯದ ವ್ಯಕ್ತಿಯ ಬಂಧನ
ಕಿರ್ಪಾನ್
Published On :
ನವದೆಹಲಿ: ಸಿಖ್ ಧರ್ಮದ ಧಾರ್ಮಿಕ ಭಾಗವಾಗಿರುವ ಕಿರ್ಪಾನ್ (ಸಣ್ಣ ಕತ್ತಿ) ನ್ನು ಧರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. 
ಕಳೆದ 9 ವರ್ಷಗಳ ಹಿಂದೆ ಸಿಖ್ ಧರ್ಮಕ್ಕೆ ಮತಾಂತರಗೊಂಡಿದ್ದ ಜಸ್ಟಿನ್ ಸ್ಮಿತ್ ಅಲಿಯಾಸ್ ಹರ್ಪ್ರೀತ್ ಸಿಂಗ್ ಖಾಲ್ಸಾ ಕೇಟರಿಂಗ್ ಉದ್ಯಮ ಹೊಂದಿದ್ದು, ಅಂಗಡಿಗೆ ತೆರಳಿದ್ದಾಗ ಅಲ್ಲಿದ್ದ ಗ್ರಾಹಕರೊಬ್ಬರು ಕಿರ್ಪಾನ್ ನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹರ್ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿದೆ. 
ಹರ್ಪ್ರೀತ್ ಸಿಂಗ್ ಗೆ ಈ ಹಿಂದೆಯೂ ಇಂತಹ ಅನುಭವಗಳಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಮೆರಿಕ ಪತ್ರಿಕೆಯೊಂದು ವರದಿ ಮಾಡಿದ್ದು, ಕಳೆದ ವಾರವೂ ಹರ್ಪ್ರೀತ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಕಿರ್ಪಾನ್ ಧರಿಸುವುದು ಸಿಖ್ ಧರ್ಮದ ಭಾಗ ಎಂದು ಹರ್ಪ್ರೀತ್ ಸಿಂಗ್ ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟ ನಂತರ ಪ್ರಕರಣ ದಾಖಲಿಸಿಕೊಳ್ಳದೇ ಬಿಡುಗಡೆ ಮಾಡಿದ್ದರಂತೆ. ಈಗ ಮತ್ತೊಮ್ಮೆ ಹರ್ಪ್ರೀತ್ ಸಿಂಗ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.