ಅಸಮರ್ಥ ನೌಕರರನ್ನು ಗುರುತಿಸಿ ಕೆಲಸದಿಂದ ತೆಗೆದುಹಾಕಿ: ಇಲಾಖೆ ಮುಖ್ಯಸ್ಥರಿಗೆ ರಾಜಸ್ತಾನ ಸರ್ಕಾರ ಆದೇಶ
ನಾಗರಿಕ ಸೇವಾ ಇಲಾಖೆಗಳಲ್ಲಿ 15 ವರ್ಷಗಳನ್ನು ಪೂರೈಸಿದ ಅಥವಾ 50 ವರ್ಷಗಳನ್ನು ಕಳೆದ...

Published On :
ಜೈಪುರ: ನಾಗರಿಕ ಸೇವಾ ಇಲಾಖೆಗಳಲ್ಲಿ 15 ವರ್ಷಗಳನ್ನು ಪೂರೈಸಿದ ಅಥವಾ 50 ವರ್ಷಗಳನ್ನು ಕಳೆದ ಸರ್ಕಾರಿ ನೌಕರರ ಕೆಲಸ ಅತೃಪ್ತಿಕರವಾಗಿದ್ದರೆ ಅವರನ್ನು ಗುರುತಿಸಿ ಕೆಲಸದಿಂದ ತೆಗೆದುಹಾಕುವಂತೆ ರಾಜಸ್ತಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ಒ.ಪಿ.ಮೀನಾ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಆದೇಶ ನೀಡಿದ್ದಾರೆ.
ಇಲಾಖೆಗಳು ದುರ್ಬಲ ಸಿಬ್ಬಂದಿಯನ್ನು ಗುರುತಿಸಿ ಅವರನ್ನು ನೌಕರಿಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಮುಗಿಸುವಂತೆ ಅವರು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ತಿಳಿಸಿದ್ದಾರೆ.
ರಾಜಸ್ತಾನ ನಾಗರಿಕ ಸೇವೆ(ಪಿಂಚಣಿ) ನಿಯಮ 1996ರ ನಿಯಮ 53(1)ರ ಪ್ರಕಾರ, 15 ವರ್ಷಗಳ ಸೇವೆ ಪೂರೈಸಿದ ಅಥವಾ 50 ವರ್ಷ ದಾಟಿದ ನೌಕರರು ಅಥವಾ ಅಧಿಕಾರಿಗಳು ಶಂಕಾಸ್ಪದ ಸಮಗ್ರತೆ ಮತ್ತು ಅತೃಪ್ತಿಕರ ಕೆಲಸ ದಾಖಲೆ ಹೊಂದಿರುವವರು ಅಥವಾ ಕೆಲವು ಅಸಮಾರ್ಥ್ಯದಿಂದ ಕೆಲಸ ಮಾಡಲು ಸಾಧ್ಯವಾಗದವರನ್ನು ಕೆಲಸದಿಂದ ತೆಗೆದುಹಾಕುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಕಳಪೆ ಗುಣಮಟ್ಟದ ನೌಕರರಿಗೆ ನೊಟೀಸ್ ನೀಡಿ ಮೂರು ತಿಂಗಳೊಳಗೆ ಅಥವಾ ಮೂರು ತಿಂಗಳ ವೇತನ ಮತ್ತು ಭತ್ಯೆ ನೀಡಿ ತಕ್ಷಣವೇ ಸೇವೆಯಿಂದ ತೆಗೆದುಹಾಕುವಂತೆ ಆದೇಶದಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


