ದೇಶ

ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ 7 ಅಂಶಗಳ ತಂತ್ರ ಹೊಂದಿದೆ: ಪ್ರಕಾಶ್ ಜಾವದೇಕರ್

ದೇಶದ ವಿವಿಧ ರಾಜ್ಯಗಳಲ್ಲಿ ರೈತರ ಅನಿಶ್ಚಿತತೆ ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಇನ್ನು 5 ವರ್ಷಗಳಲ್ಲಿ...

ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ 7 ಅಂಶಗಳ ತಂತ್ರ ಹೊಂದಿದೆ: ಪ್ರಕಾಶ್ ಜಾವದೇಕರ್
ಪ್ರಕಾಶ್ ಜಾವದೇಕರ್
Published On :
ವಡೋದರ: ದೇಶದ ವಿವಿಧ ರಾಜ್ಯಗಳಲ್ಲಿ ರೈತರ ಅನಿಶ್ಚಿತತೆ ಮುಂದುವರಿಯುತ್ತಿರುವ ಸಂದರ್ಭದಲ್ಲಿ,  ಇನ್ನು 5 ವರ್ಷಗಳಲ್ಲಿ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ 7 ಅಂಶಗಳ ತಂತ್ರವನ್ನು ಹೊಂದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವದೇಕರ್ ತಿಳಿಸಿದ್ದಾರೆ.
ಪ್ರಧಾನಿಯವರು ಕಳೆದ ವರ್ಷ ಅನಾವರಣಗೊಳಿಸಿದ ಈ 7 ಅಂಶಗಳ ತಂತ್ರದಲ್ಲಿ ನೀರಾವರಿಗೆ ಕ್ರಮಗಳು, ಉತ್ತಮ ಗುಣಮಟ್ಟದ ಬೀಜದ ಪೂರೈಕೆ ಮತ್ತು ಸುಗ್ಗಿಯ ನಂತರದ ನಷ್ಟವನ್ನು ತಡೆಗಟ್ಟಲು ತೆಗೆದುಕೊಳ್ಳುವ ಕ್ರಮಗಳನ್ನು ಒಳಗೊಂಡಿದೆ.
ಎನ್ ಡಿಎ ಸರ್ಕಾರ ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ಉದ್ದೇಶ ಹೊಂದಿದೆ. ಕೃಷಿ ಉತ್ಪನ್ನಗಳನ್ನು ಹೆಚ್ಚಿಸುವ ಹಳೆಯ ಪದ್ಧತಿಗೆ ಬದಲು ರೈತರ ಆದಾಯವನ್ನು ಹೆಚ್ಚಿಸಲು ನಾವು ಉತ್ತೇಜನ ನೀಡುತ್ತೇವೆ ಎಂದು ಸಚಿವರು ಹೇಳಿದರು.
ವಡೋದರದಿಂದ 40 ಕಿಲೋ ಮೀಟರ್ ದೂರದಲ್ಲಿ ಆನಂದ್ ಎಂಬಲ್ಲಿ ಮೋದಿ ಫೆಸ್ಟ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
7 ಅಂಶಗಳ ಕಾರ್ಯತಂತ್ರಗಳನ್ನು ವಿಸ್ತರಿಸಿ ಹೇಳಿದ ಅವರು, ಹೆಚ್ಚಿನ ಬಜೆಟ್ ಮೂಲಕ ನೀರಾವರಿಗೆ ವಿಶೇಷ ಗಮನ ಹರಿಸಲಾಗುವುದು. ಪ್ರತಿ ಹನಿ, ಹೆಚ್ಚಿನ ಬೆಳೆಯ ಮೂಲಕ ಉತ್ತಮ ಇಳುವರಿ ನೀಡುವ ಬೀಜ, ಫಲಭರಿತ ಮಣ್ಣು, ಆಹಾರ ಸಂಸ್ಕರಣೆಯ ನಂತರದ ಕೊಯ್ಲು ಬೆಳೆ ನಷ್ಟವನ್ನು ತಡೆಗಟ್ಟುವ ಸಲುವಾಗಿ ಮತ್ತು ಮೌಲ್ಯ ಸೇರ್ಪಡೆಗೆ ಉತ್ತೇಜಿಸಲು ಗೋದಾಮಿನ ಮತ್ತು ಶೀತ ಸರಪಳಿಯಲ್ಲಿ ದೊಡ್ಡ ಹೂಡಿಕೆ ಮಾಡಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಸೃಷ್ಟಿ, ಕೈಗೆಟುಕುವ ವೆಚ್ಚದಲ್ಲಿ ಅಪಾಯಗಳನ್ನು ತಗ್ಗಿಸಲು ಮತ್ತು ಕೋಳಿ, ಜೇನುಸಾಕಣೆ ಮತ್ತು ಮೀನುಗಾರಿಕೆ ಮುಂತಾದ ಪೂರಕ ಚಟುವಟಿಕೆಗಳ ಉತ್ತೇಜನೆಗೆ ಹೊಸ ಬೆಳೆ ವಿಮೆ ಯೋಜನೆಯ ಪರಿಚಯವು ಸಹ ತಂತ್ರದ ಭಾಗವಾಗಿದೆ ಎಂದು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.