1993 ಮುಂಬೈ ಸರಣಿ ಸ್ಫೋಟ: ಅಬು ಸಲೇಂ ಸೇರಿ 6 ಮಂದಿ ದೋಷಿಗಳು; ಟಾಡಾ ಕೋರ್ಟ್ ತೀರ್ಪು
1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ತೀರ್ಪು 24 ವರ್ಷಗಳ ನಂತರ ಪ್ರಕಟವಾಗಿದ್ದು, ಸಂಚು ರೂಪಿಸಿ, ಸ್ಫೋಟ ನಡೆಸಿದ್ದ ದೋಸಾ ಸಹೋದರರು ದೋಷಿಗಳೆಂದು ಮುಂಬೈ ನ ಟಾಡಾ ನ್ಯಾಯಾಲಯ

Published On :
ಮುಂಬೈ: 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ತೀರ್ಪು 24 ವರ್ಷಗಳ ನಂತರ ಪ್ರಕಟವಾಗಿದ್ದು, ಸಂಚು ರೂಪಿಸಿ, ಸ್ಫೋಟ ನಡೆಸಿದ್ದ ಮುಸ್ತಾಫಾ ದೋಸಾ, ಆತನ ಸಹೋದರ ಮೊಹಮ್ಮದ್ ದೋಸಾ, ತಾಹಿರ್ ಮರ್ಚೆಂಟ್, ಅಬು ಸಲೇಂ ಸೇರಿದಂತೆ 6 ಆರೋಪಿಗಳನ್ನು ಮುಂಬೈ ನ ಟಾಡಾ ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ಪ್ರಕಟಿಸಿದೆ. ಆರೋಪಿಗಳ ಪೈಕಿ ರಿಯಾಜ್ ಸಿದ್ದಿಕಿಯನ್ನು ಕೋರ್ಟ್ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದ್ದು ಖುಲಾಸೆಗೊಳಿಸಿದೆ
1993 ರ ಮಾರ್ಚ್.12 ರಂದು ನಡೆದಿದ್ದ ಸರಣಿ ಸ್ಫೋಟದಲ್ಲಿ 257 ಜನರು ಮೃತಪಟ್ಟಿದ್ದರೆ, 715 ಜನರು ಗಂಭೀರವಾಗಿ ಗಾಯಗೊಂಡಿದ್ದರು ಹಾಗೂ 27 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯುಂಟಾಗಿತ್ತು.
ಪ್ರಕರಣದ ಪ್ರಮುಖ ಆರೋಪಿಗಳಾದ ಮುಸ್ತಫಾ ದೋಸಾ, ಮೊಹಮ್ಮದ್ ದೋಸಾ, ಮೊಹಮ್ಮದ್ ತಾಹಿರ್ ಅಪರಾಧಿಗಳೆಂದು ಮುಂಬೈ ನ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಸ್ಫೋಟಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿ ಸಹಕರಿಸಿದ್ದ ಫಿರೋಜ್ ರಶೀದ್ ಖಾನ್ ಸಹ ಅಪರಾಧಿಗಳೆಂದು ನ್ಯಾಯಾಲಯ ಹೇಳಿದೆ.
ಸ್ಫೋಟ ಪ್ರಕರಣದಲ್ಲಿ ಅಬು ಸಲೇಂ ಸಹ ಭಾಗಿಯಾಗಿದ್ದು, 20೦5 ರಲ್ಲಿ ಆತನನ್ನು ಪೋರ್ಚುಗಲ್ ನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಪ್ರಕರಣದ ಮತ್ತೋರ್ವ ಆರೋಪಿ ಮುಸ್ತಾಫಾ ದೋಸಾ ನನ್ನು ಯುಎಇ ಯಿಂದ ಬಂಧಿಸಿ ಕರೆ ತರಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Mumbai courtಮುಂಬೈ ಕೋರ್ಟ್1993 Mumbai Blasts CaseDossa brothers1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದೋಸಾ ಸಹೋದರರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


