ರಾಷ್ಟ್ರಪತಿ ಚುನಾವಣೆ: ಕಾರ್ಯತಂತ್ರ ಚರ್ಚೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಹೊರಗಿಟ್ಟ ಪ್ರತಿಪಕ್ಷಗಳ ಗುಂಪು!
ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ? ಇದು ಸಧ್ಯಕ್ಕೆ ದೇಶಾದ್ಯಂತ ಕುತೂಹಲ ಮೂಡಿಸುತ್ತಿರುವ ಸಂಗತಿಯಾಗಿದೆ.

Published On :
ನವದೆಹಲಿ: ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ? ಇದು ಸಧ್ಯಕ್ಕೆ ದೇಶಾದ್ಯಂತ ಕುತೂಹಲ ಮೂಡಿಸುತ್ತಿರುವ ಸಂಗತಿಯಾಗಿದೆ. ಎನ್ ಡಿಎ ಅಭ್ಯರ್ಥಿಯ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರತಿಪಕ್ಷಗಳು ಚಿಂತನೆ ನಡೆಸಿದ್ದು, ಕಾರ್ಯತಂತ್ರ ಹೆಣೆಯುವುದರಲ್ಲಿ ಮಗ್ನವಾಗಿವೆ. ಇದಕ್ಕಾಗಿ ಬಹುತೇಕ ಎಲ್ಲಾ ಪ್ರತಿಪಕ್ಷಗಳು ಒಗ್ಗಟ್ಟಾಗಿ ಚರ್ಚೆ ನಡೆಸುತ್ತಿವೆ. ಆದರೆ ಆಮ್ ಆದ್ಮಿ ಪಕ್ಷವನ್ನು ಮಾತ್ರ ಪ್ರತಿಪಕ್ಷಗಳ ತಂಡ ಹೊರಗಿಟ್ಟಿವೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆಮ್ ಆದ್ಮಿ ಪಕ್ಷವನ್ನೂ ಚರ್ಚೆಯಲ್ಲಿ ಸೇರಿಸಿಕೊಳ್ಳಬೇಕೆಂಬ ಸಲಹೆ ನೀಡಿದ್ದರಾದರೂ ಕಾಂಗ್ರೆಸ್ ನ ಗುಲಾಮ್ ನಬಿ ಆಜಾದ್, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಇತರ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಯು ನಾಯಕ ಶರದ್ ಯಾದವ್ ಸಹ ರಾಷ್ಟ್ರಪತಿ ಚುನಾವಣೆಯ ವಿಷಯದ ಚರ್ಚೆ, ಕಾರ್ಯತಂತ್ರದಲ್ಲಿ ಆಮ್ ಆದ್ಮಿ ಪಕ್ಷವನ್ನು ಸೇರಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರಂತೆ. ಆಮ್ ಆದ್ಮಿ ಪಕ್ಷ ಬಿಜೆಪಿಯ ಬಿ ಟೀಂ ಇದ್ದಂತೆ ಆದ್ದರಿಂದ ಅದನ್ನು ಪ್ರತಿಪಕ್ಷಗಳ ಗುಂಪಿನಿಂದ ಹೊರಗಿಡಬೇಕೆಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


