ರಾಷ್ಟ್ರಪತಿ ಚುನಾವಣೆಗೆ ಒಮ್ಮತ ಮೂಡಿಸಲು ಸಮಿತಿ ರಚಿಸಿದ ಬಿಜೆಪಿ
ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿಯ ಕಡೆಗೆ ನಮ್ಮ ಒಲವು ಎಂದಿರುವ ಬಿಜೆಪಿ ಪಕ್ಷ ಇತರ ಪಕ್ಷಗಳ ಜೊತೆಗೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಲು ಹಿರಿಯ ಸಚಿವರುಗಳುಳ್ಳ ಮೂರು ಸದಸ್ಯರ

Published On :
ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿಯ ಕಡೆಗೆ ನಮ್ಮ ಒಲವು ಎಂದಿರುವ ಬಿಜೆಪಿ ಪಕ್ಷ ಇತರ ಪಕ್ಷಗಳ ಜೊತೆಗೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಲು ಹಿರಿಯ ಸಚಿವರುಗಳುಳ್ಳ ಮೂರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ.
ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷರುಗಳಾದ ಗೃಹ ಸಚಿವ ರಾಜನಾಥ್ ಸಿಂಗ್, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಈ ಸಮಿತಿಯ ಭಾಗವಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.
"ಒಮ್ಮತ ಮೂಡಿಸಲು ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಈ ಸಮಿತಿಯ ಸದಸ್ಯರು ಹಲವು ಸುತ್ತಿನ ಮಾತುಕತೆ ನಡೆಸಲಿದ್ದಾರೆ" ಎಂದು ಬಿಜೆಪಿ ಹೇಳಿದೆ.
ಸದರಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರ ಅವಧಿ ಜುಲೈ ೨೪ ಕ್ಕೆ ಮುಗಿಯುವುದರಿಂದ, ರಾಷ್ಟ್ರಪತಿ ಚುನಾವಣೆ ಜುಲೈ ೧೭ಕ್ಕೆ ಜರುಗಲಿದೆ.
ಅಭ್ಯರ್ಥಿ ಯಾರಿರಬಹುದು ಎಂಬ ಸುಳಿವನ್ನು ಬಿಜೆಪಿ ಇನ್ನು ಬಿಟ್ಟುಕೊಟ್ಟಿಲ್ಲ. ಈ ಮಧ್ಯೆ ವಿರೋಧ ಪಕ್ಷ ಕಾಂಗ್ರೆಸ್ ಕೂಡ ಹಲವು ಮೈತ್ರಿ ಪಕ್ಷಗಳ ಜೊತೆಗೆ ಮಾತುಕತೆ ನಡೆಸಿದೆ. ಆಡಳಿತ ಪಕ್ಷ ಅಭ್ಯರ್ಥಿಯನ್ನು ಘೋಷಿಸುವವರೆಗೂ ಕಾದು ನೋಡಲು ವಿಪಕ್ಷಗಳು ನಿರ್ಧರಿಸಿವೆ. ವಿರೋಧ ಪಕ್ಷಗಳು ಜೂನ್ ೧೪ ರಂದು ಮತ್ತೆ ಸಭೆ ಸೇರಿ ಈ ವಿಷಯವಾಗಿ ಚರ್ಚಿಸಲಿವೆ.
ಈ ಚರ್ಚೆಗಳನ್ನು ಮುಂದುವರೆಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿವಿಧ ಪಕ್ಷಗಳ ೧೦ ಸದಸ್ಯರ ಉಪತಂಡವೊಂದನ್ನು ರಚಿಸಿದ್ದರು. ಈ ತಂಡದಲ್ಲಿ ಕಾಂಗ್ರೆಸ್ ಪಕ್ಷದ ಗುಲಾಂ ನಭಿ ಅಜಾದ್ ಮತ್ತು ಮಲ್ಲಿಕಾರ್ಜುನ್ ಖರ್ಗೆ, ಜೆಡಿಯು ಪಕ್ಷದ ಶರದ್ ಯಾದವ್, ಆರ್ ಜೆ ಡಿ ಪಕ್ಷದ ಲಾಲು ಪ್ರಸಾದ್, ಸಿಪಿಐ-ಎಂ ನ ಸೀತಾರಾಮ್ ಯೆಚೂರಿ, ಟಿಎಂಸಿಯ ಡೆರೆಕ್ ಒ'ಬ್ರೇನ್, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಬಿ ಎಸ್ ಪಿ ಯ ಚಂದ್ರ ಮಿಶ್ರ, ಡಿಎಂಕೆಯ ಆರ್ ಎಸ್ ಭಾರತಿ ಮತ್ತು ಎನ್ ಸಿ ಪಿಯ ಪ್ರಫುಲ್ ಪಟೇಲ್ ಕೂಡ ಸೇರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


