ಜೆಇಇ 2017ರ ಫಲಿತಾಂಶ ಪ್ರಕಟ: ವಿದ್ಯಾರ್ಥಿಗಳು ತಿಳಿದಿರಬೇಕಾದ ಅಂಶಗಳು
ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಪರೀಕ್ಷೆ 2017ರ ಫಲಿತಾಂಶ ಇಂದು ಬೆಳಗ್ಗೆ 10 ಗಂಟೆಗೆ...

Published On :
ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಪರೀಕ್ಷೆ 2017ರ ಫಲಿತಾಂಶ ಇಂದು ಬೆಳಗ್ಗೆ 10 ಗಂಟೆಗೆ ಪ್ರಕಟಗೊಂಡಿದೆ.
ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ)ಯಲ್ಲಿ ಪ್ರವೇಶ ಪಡೆಯಲು ಜೆಇಇ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು results.jeeadv.ac.in ಹಾಗೂ www.jeeadv.ac.in ನಲ್ಲಿ ವೀಕ್ಷಿಸಬಹುದು.
ಕಳೆದ ತಿಂಗಳು 21ರಂದು ನಡೆದ ಪರೀಕ್ಷೆಗೆ ಕನಿಷ್ಠ 1.7 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.
ಮದ್ರಾಸ್ ನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಭಾರತ ಮಟ್ಟದ ರ್ಯಾಂಕ್ ಮತ್ತು ವಿಭಾಗಾವಾರು ರ್ಯಾಂಕುಗಳ ವಿವರಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಐಐಟಿ, ಎನ್ಐಟಿ ಮತ್ತು ಅತರ ಶೈಕ್ಷಣಿಕ ಸಂಸ್ಥೆಗಳ ಪ್ರವೇಶದ ಮುಂದಿನ ಹಂತಕ್ಕೆ ಜೆಇಇ ಅಡ್ವಾನ್ಸ್ ಡ್ ಮೂಲ ಹೆಜ್ಜೆಯಾಗಿದೆ. ಇನ್ನು ಜೆಇಇ ಮುಖ್ಯ ಪರೀಕ್ಷೆ ನಡೆಯಲಿದೆ. ಅದನ್ನು ಜೆಒಎಸ್ಎಎ ಎಂದು ಕರೆಯುತ್ತಾರೆ.
ಈ ವರ್ಷ 97 ಶಿಕ್ಷಣ ಸಂಸ್ಥೆಗಳು ಜೆಒಎಸ್ಎಎ 2017ರಲ್ಲಿ ಭಾಗವಹಿಸಲಿದ್ದಾರೆ. ಅವುಗಳಲ್ಲಿ 23 ಐಐಟಿಗಳು ಕೂಡ ಒಳಗೊಂಡಿವೆ. ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲು 600ಕ್ಕೂ ಹೆಚ್ಚು ವಿಷಯಗಳಿವೆ.
ಆಯ್ಕೆ ಭರ್ತಿ ಪ್ರಕ್ರಿಯೆ ಇದೇ 15ರಂದು ಆರಂಭವಾಗಿ 26ರವರೆಗೆ ನಡೆಯಲಿದೆ. ಮೊದಲ ಹಂತದ ಸೀಟು ಹಂಚಿಕೆ ಇದೇ 28ಕ್ಕೆ ಆರಂಭವಾಗಿ 7ನೇ ಸುತ್ತಿನ ಸೀಟು ಹಂಚಿಕೆ ಜುಲೈ 18ರಂದು ಮುಕ್ತಾಯಗೊಳ್ಳಲಿದ್ದು ಸಂಪೂರ್ಣ ಪ್ರಕ್ರಿಯೆ ಜುಲೈ 19ರಂದು ಮುಕ್ತಾಯವಾಗಲಿದೆ.
ಜೆಒಎಸ್ಎಎ 2017, ಏನಿದು: ಜಂಟಿ ಸೀಟು ಹಂಚಿಕೆ ಪ್ರಾಧಿಕಾರ(ಜೆಒಎಸ್ಎಎ)ನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸ್ಥಾಪಿಸಿದೆ. 2017-18ನೇ ಸಾಲಿನಲ್ಲಿ ದೇಶದ 97 ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸೀಟು ಹಂಚಿಕೆಯನ್ನು ನಿರ್ವಹಿಸಿ ನಿಯಂತ್ರಿಸುತ್ತದೆ. ಈ ಶಿಕ್ಷಣ ಸಂಸ್ಥೆಗಳಲ್ಲಿ 23 ಐಐಟಿಗಳು, 31 ಎನ್ಐಟಿಗಳು, 23 ಐಐಐಟಿಗಳು ಮತ್ತು 20 ಇತರ ಸರ್ಕಾರ ಸರ್ಕಾರ ಫಂಡ್ಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಗಳು ಒಳಗೊಂಡಿವೆ. ಒಂದೇ ವೇದಿಕೆಯಡಿ ಈ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿ ನೀಡಲಾಗುತ್ತದೆ.
ಐಐಟಿ ಮತ್ತು ಎನ್ಐಟಿಗಳಲ್ಲಿ ಅರ್ಜಿ ಸಲ್ಲಿಕೆ: ಜೆಇಇ ಅಡ್ವಾನ್ಸ್ ಡ್ ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಮಾಡಿಕೊಳ್ಳಬಹುದು.
ಐಐಟಿ ಹೊರತುಪಡಿಸಿ ಎನ್ ಐಟಿ ವ್ಯವಸ್ಥೆಯಲ್ಲಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳು ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


