ದೇಶ

ಎಂಬಿಎ ಪದವೀಧರೆಗೆ ಲೈಂಗಿಕ ಕಿರುಕುಳ: ಆಟೋದಿಂದ ಹೊರಗೆಸೆದ ಕಿರಾತಕರು

23 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಮೂವರು ಕಿರಾತಕರು ನಂತರ ಆಕೆಯನ್ನು ಆಟೋದಿಂದ ಹೊರಗೆಸೆದಿರುವ ಘಟನೆ...

ಎಂಬಿಎ ಪದವೀಧರೆಗೆ ಲೈಂಗಿಕ ಕಿರುಕುಳ: ಆಟೋದಿಂದ ಹೊರಗೆಸೆದ ಕಿರಾತಕರು
ಸಾಂದರ್ಭಿಕ ಚಿತ್ರ
Published On :
ಥಾಣೆ: 23 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಮೂವರು ಕಿರಾತಕರು ನಂತರ ಆಕೆಯನ್ನು ಆಟೋದಿಂದ ಹೊರಗೆಸೆದಿರುವ ಘಟನೆ ಮುಂಬಯಿಯ ಥಾಣೆಯಲ್ಲಿ ನಡೆದಿದೆ.
ಎಂಬಿಎ ಪದವೀಧರೆಯಾಗಿರುವ ಮಹಿಳೆ ಜಿಮ್ ವೊಂದರಲ್ಲಿ ಕೆಲಸ ಮುಗಿಸಿ ವಾಪಸ್ ನಿನ್ನೆ ರಾತ್ರಿ ಮನೆಗೆ ಬರುತ್ತಿದ್ದಳು ಈ ವೇಳೆ ರಾತ್ರಿ 9.30 ರ ಸಮಯದಲ್ಲಿ ಪುರುಷ ಪ್ರಯಾಣಿಕರ ಜೊತೆ ಆಟೋ ಹತ್ತಿದ್ದಳು. ಆಟೋ ಸ್ವಲ್ಪ ದೂರ ಸಂಚರಿಸುವಷ್ಟರಲ್ಲಿ ಜೊತೆಗಿದ್ದ ಸಹ ಪ್ರಯಾಣಿಕರಲ್ಲಿ ಒಬ್ಬ, ಆಕೆಯ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ. ಈ ವೇಳೆ ಅದನ್ನು ವಿರೋಧಿಸಿದ ಆಕೆ ಜೋರಾಗಿ ಕಿರುಚಿಕೊಂಡಿದ್ದಾಳೆ. 
ಆಕೆ ಕಿರುಚಿಕೊಂಡಿದ್ದರಿಂದ  ಚಾಲಕ ಆಟೋವನ್ನು ಬೇರೆ ರಸ್ತೆಗೆ ಬದಲಾಯಿಸಿದ್ದಾನೆ. ನಂತರ ಸಹ ಪ್ರಯಾಣಿಕ ಮತ್ತು ಆಟೋ ಚಾಲಕ ಮಹಿಳೆಗೆ ಥಳಿಸಿದ್ದಾರೆ. ನಂತರ ಪೋಕ್ರಾನ್ ರಸ್ತೆಯಲ್ಲಿ ಆಕೆಯನ್ನು ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿದ್ದ ಮಹಿಳೆಯನ್ನು ದಾರಿ ಹೋಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.