ದೇಶ

ಬಿಹಾರ: ಮೊಬೈಲ್ ಕೇಳಿದ್ದಕ್ಕೆ ತುಂಬು ಗರ್ಭಿಣಿಯನ್ನು ಮಹಡಿಯಿಂದ ತಳ್ಳಿದ ಪತಿ!

ಮೊಬೈಲ್ ಕೇಳಿದ ಕಾರಣಕ್ಕೆ ಕೋಪಗೊಂಡ ಪತಿಯೊಬ್ಬ ತುಂಬು ಗರ್ಭಿಣಿಯನ್ನು 2ನೇ ಅಂತಸ್ತಿನ ಕಟ್ಟಡದಿಂದ ಕೆಳಗೆ ತಳ್ಳಿರುವ ಘಟನೆಯೊಂದು ಬಿಹಾರದಲ್ಲಿ ಬುಧವಾರ ನಡೆದಿದೆ...

ಬಿಹಾರ: ಮೊಬೈಲ್ ಕೇಳಿದ್ದಕ್ಕೆ ತುಂಬು ಗರ್ಭಿಣಿಯನ್ನು ಮಹಡಿಯಿಂದ ತಳ್ಳಿದ ಪತಿ!
ಸಂಗ್ರಹ ಚಿತ್ರ
Published On :
ಪಾಟ್ನ: ಮೊಬೈಲ್ ಕೇಳಿದ ಕಾರಣಕ್ಕೆ ಕೋಪಗೊಂಡ ಪತಿಯೊಬ್ಬ ತುಂಬು ಗರ್ಭಿಣಿಯನ್ನು 2ನೇ ಅಂತಸ್ತಿನ ಕಟ್ಟಡದಿಂದ ಕೆಳಗೆ ತಳ್ಳಿರುವ ಘಟನೆಯೊಂದು ಬಿಹಾರದಲ್ಲಿ ಬುಧವಾರ ನಡೆದಿದೆ. 
ಬಬಿತಾ ದೇವಿ (28) ಮಹಡಿಯಿಂದ ಬಿದ್ದ ಪತ್ನಿಯಾಗಿದ್ದಾಳೆ. ಮಹಡಿ ಮೇಲೆ ನಿಂತಿದ್ದ ಬಬಿತಾ ಪತಿ ರಮಣ್ ಠಾಕೂರ್ ಫೋನಿನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಪೋಷಕರೊಂದಿಗೆ ಮಾತನಾಡಬೇಕು ಮೊಬೈಲ್ ನೀಡುವಂತೆ ಪತಿಯನ್ನು ಕೇಳಿದ್ದಾಳೆ. ಕೂಡಲೇ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ರಮಣ್ ಬಬಿತಾಳನ್ನು ಎತ್ತಿಕೊಂಡು ಮಹಡಿಯಿಂದ ಕೆಳಗೆ ಹಾಕಿದ್ದಾನೆ. 
ಕೂಡಲೇ ಸ್ಥಳೀಯರು ಬಬಿತಾ ದೇವಿಯನ್ನು ದರ್ಭಾಂಗ ಟೌನ್ ನಲ್ಲಿರುವ ಆರ್'ಬಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಬಿತಾ 7 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಮಹಡಿಯಿಂದ ಕೆಳಗೆ ಎಸೆದ ಪರಿಣಾಮ ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿದೆ. ಅಲ್ಲದೆ, ಬಬಿತಾ ಕಾಲಿನ ಮೂಳೆಗಳು ಮುರಿದಿದೆ ಎಂದು ಪೊಲೀಸರು ಹೇಳಿದ್ದಾರೆ. 
ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವುದರಿಂದ ಮಗುವನ್ನು ಹೊರ ತೆಗೆಯಲು ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಬೇಕಿದೆ. ಮೂರು ದಿನಗಳೊಳಗಾಗಿ ಮಹಿಳೆ ಚೇತರಿಸಿಕೊಂಡರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. 
ಇನ್ನು ಪ್ರಕರಣ ಸಂಬಂಧ ರಮಣ್ ಕುಟುಂಬಸ್ಥರ ವಿರುದ್ದ ಬಬಿತಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮಣ್ ಪೋಷಕರು ನನ್ನ ಮಗಳಿಗೆ ನಿರಂತರ ವರದಕ್ಷಿಣ ಕಿರುಕುಳ ನೀಡುತ್ತಿದ್ದರು. ನಿನ್ನೆ ಕೂಡ ಗಂಡನೊಂದಿಗೆ ಜಗಳವಾಡಿಕೊಂಡು ಬಬಿತಾಳೇ ಸ್ವತಃ ಮಹಡಿ ಮೇಲಿಂದ ಕೆಳಗೆ ಬಿದ್ದಿದ್ದಾಳೆಂದು ಹೇಳಿಕೊಂಡಿದ್ದಾರೆ. 
ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ದರ್ಭಾಂಗ ಹೆಚ್ಚುವರಿ ಪೊಲೀಸ್ ಆಯುಕ್ತ ದಿಲ್ನಾವಾಜ್ ಅಹ್ಮದ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.