ದೇಶ

ಎನ್'ಡಿಟಿವಿ ಮೇಲೆ ದಾಳಿ ನಡೆಸಿಲ್ಲ, ಪ್ರಾಯೋಜಕರು ಪರಿಶೀಲನೆ ನಡೆಸಬೇಕು: ನಾಯ್ಡು

ಎನ್'ಡಿಟಿವಿ ಮೇಲೆ ಯಾವುದೇ ರೀತಿಯ ದಾಳಿಗಳನ್ನು ನಡೆಸಿಲ್ಲ, ಸಿಬಿಐ ಆಧಿಕಾರಿಗಳಾರೂ ವಾಹಿನಿಯ ಕಚೇರಿಗೆ ಕಾಲಿಟ್ಟಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಬುಧವಾರ...

ಎನ್'ಡಿಟಿವಿ ಮೇಲೆ ದಾಳಿ ನಡೆಸಿಲ್ಲ, ಪ್ರಾಯೋಜಕರು ಪರಿಶೀಲನೆ ನಡೆಸಬೇಕು: ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
Published On :
ನವದೆಹಲಿ: ಎನ್'ಡಿಟಿವಿ ಮೇಲೆ ಯಾವುದೇ ರೀತಿಯ ದಾಳಿಗಳನ್ನು ನಡೆಸಿಲ್ಲ, ಸಿಬಿಐ ಆಧಿಕಾರಿಗಳಾರೂ ವಾಹಿನಿಯ ಕಚೇರಿಗೆ ಕಾಲಿಟ್ಟಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಬುಧವಾರ ಹೇಳಿದ್ದಾರೆ. 
ಎನ್'ಡಿಟಿವಿ ಮೇಲೆ ದಾಳಿ ನಡೆಸುವ ಮೂಲಕ ಕೇಂದ್ರ ಸರ್ಕಾರ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಮಾಡುತ್ತಿದೆ ಎಂಬ ಆರೋಪದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವೆಂಕಯ್ಯ ನಾಯ್ಡು ಅವರು, ಎನ್'ಡಿಟಿವಿ ಮೇಲೆ ಯಾವುದೇ ರೀತಿಯ ದಾಳಿಗಳಾಗಿಲ್ಲ. ಸುದ್ದಿ ವಾಹಿನಿಯ ಸ್ಟುಡಿಯೋ ಆಗಲಿ, ವಾಹಿನಿ ಇರುವ ಪ್ರದೇಶದ ಬಳಿಯಾಗಲಿ ಸಿಬಿಐ ಆಧಿಕಾರಿಗಳು ಕಾಲಿಟ್ಟಿಲ್ಲ. ಆರೋಪ ಮಾಡುವುದಕ್ಕೂ ಮೊದಲು ವಾಹಿನಿಯ ಆಡಳಿತ ಮಂಡಳಿ ಹಾಗೂ ಪ್ರಾಯೋಜಕರು ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ. 
ಕಾನೂನು ಪ್ರಕ್ರಿಯೆಗಳಿರುವುದರಿಂದ ದಾಖಲೆಗಳನ್ನು ಎನ್ ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್, ರಾಧಿಕಾ ರಾಯ್ ಅವರು ಸಲ್ಲಿಕೆ ಮಾಡಬೇಕಿತ್ತು. ಪ್ರಸ್ತುತ ಅವರು ನೀಡಿರುವ ಮಾಹಿತಿಗಳನ್ನು, ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಮಾಧ್ಯಗಳು ಕಾನೂನಿಗಿಂತ ಮೇಲೆಂದು ತಿಳಿಯಬಾರದು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಾಧ್ಯಮಗಳ ಮಾಲೀಕತ್ವವನ್ನುನ ಪ್ರಾಥಮಿಕ ವ್ಯವಹಾರವಲ್ಲವೆಂದು ಪರಿಗಣಿಸಿರುವ ಕೆಲ ಕಾರ್ಪೋರೇಟ್ ಮತ್ತು ಘಟನೆಗಳು ನೋಡಿಕೊಳ್ಳುತ್ತಿವೆ. ಇಂತಹ ಬೆಳವಣಿಗೆಗಳು ಕಂಡು ಬಂದಾಗ ಕೆಲವರು ಕಾನೂನಿಗಿಂತ ಮಾಧ್ಯಮಗಳೇ ಮೇಲೆಂದು ತಿಳಿಯುತ್ತಿವೆ ಎಂದು ತಿಳಿಸಿದ್ದಾರೆ. 

ಬ್ಯಾಂಕ್ ವ್ಯವಹಾರ ಪ್ರಕರಣದ ಹಿನ್ನಲೆಯಲ್ಲಿ ಎನ್ ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್ ನಿವಾಸದ ಮನೆ ಮೇಲೆ ಸಿಬಿಐ ನಿನ್ನೆಯಷ್ಟೇ ದಾಳಿ ನಡೆಸಿತ್ತು. ಇದಕ್ಕೆ ಮಾಧ್ಯಮ ವರ್ಗದಿಂದ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.