ಬಿಪಿನ್ ರಾವತ್ ರಿಂದ ಸೇನಾ ವೃತ್ತಿಪರ ಮಾನದಂಡ ಹಾಳು: ಸಿಪಿಐ(ಎಂ)
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಿರುದ್ಧ ಸಿಪಿಐ(ಎಂ) ಅಸಮಾಧಾನ ವ್ಯಕ್ತಪಡಿಸಿದ್ದು, ತನ್ನ ಮುಖವಾಣಿ ಪೀಪಲ್ಸ್ ಡೆಮಾಕ್ರೆಸಿಯಲ್ಲಿ ಲೇಖನ ಪ್ರಕಟಿಸಿದೆ.

Published On :
ನವದೆಹಲಿ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಿರುದ್ಧ ಸಿಪಿಐ(ಎಂ) ಅಸಮಾಧಾನ ವ್ಯಕ್ತಪಡಿಸಿದ್ದು, ತನ್ನ ಮುಖವಾಣಿ ಪೀಪಲ್ಸ್ ಡೆಮಾಕ್ರೆಸಿಯಲ್ಲಿ ಲೇಖನ ಪ್ರಕಟಿಸಿದೆ.
ಜನರಲ್ ಬಿಪಿನ್ ರಾವತ್ ಅವರು ಭಾರತೀಯ ಸೇನೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಹಾಳುಗೆಡವಿದ್ದಾರೆ ಎಂದು ಸಿಪಿಐ(ಎಂ) ಟೀಕಿಸಿದೆ. ಪ್ರತಿಭಟನಾ ನಿರತ ಕಾಶ್ಮೀರಿಗಳನ್ನು ಮಾನವ ಗುರಾಣಿಗಳನ್ನಾಗಿ ಬಳಕೆ ಮಾಡಿದ್ದ ಮೇಜರ್ ಲೀತುಲ್ ಗೊಗೊಯ್ ಅವರನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಬಿಪಿನ್ ರಾವತ್ ವಿರುದ್ಧ ಸಿಪಿಐ(ಎಂ) ಅಸಮಾಧಾನ ವ್ಯಕ್ತಪಡಿಸಿದೆ.
ಡೆಮಾಕ್ರೆಸಿಯ ಸಂಪಾದಕೀಯ ಪುಟದಲ್ಲಿ ಬಿಪಿನ್ ರಾವತ್ ಅವರ ಬಗ್ಗೆ ಲೇಖನ ಪ್ರಕಟಿಸಿರುವ ಸಿಪಿಐ(ಎಂ) ಸೇನಾ ಮುಖ್ಯಸ್ಥರು, ಕಾಶ್ಮೀರಿ ಜನತೆಯ ಧ್ವನಿಯನ್ನು ಅಡಗಿಸುವ ಮೋದಿ ಸರ್ಕಾರದ ಉದ್ದೇಶಗಳನ್ನು ಪ್ರತಿಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದೆ. ಬಿಪಿನ್ ರಾವತ್ ಅವರು ಲೀತುಲ್ ಗೊಗೊಯ್ ಅವರ ಕ್ರಮವನ್ನು ಸಮರ್ಥಿಸಿದ ಬೆನ್ನಲ್ಲೇ ಸಿಪಿಐ(ಎಂ) ಪೀಪಲ್ಸ್ ಡೆಮಾಕ್ರೆಸಿಯಲ್ಲಿ ಲೇಖನ ಪ್ರಕಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


