ಇಸ್ರೋ ಐತಿಹಾಸಿಕ ಸಾಧನೆ: ಪ್ರಧಾನಿ ಮೋದಿ, ರಾಷ್ಟ್ರಪತಿ ಫ್ರಣಬ್ ಮುಖರ್ಜಿ ಶುಭಾಶಯ!
ಜಿಎಸ್ ಎಲ್ ವಿ ಮಾರ್ಕ್ 3 ಬೃಹತ್ ಉಡಾವಣಾ ನೌಕೆಯ ಮೂಲಕ ಜಿಸ್ಯಾಟ್ 19 ಬೃಹತ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭಾಶಯ ತಿಳಿಸಿದ್ದಾರೆ.

ನವದೆಹಲಿ: ಜಿಎಸ್ ಎಲ್ ವಿ ಮಾರ್ಕ್ 3 ಬೃಹತ್ ಉಡಾವಣಾ ನೌಕೆಯ ಮೂಲಕ ಜಿಸ್ಯಾಟ್ 19 ಬೃಹತ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭಾಶಯ ತಿಳಿಸಿದ್ದಾರೆ.
ಟ್ವಿಟರ್ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾರಿರುವ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ವಿಜ್ಞಾನಿಗಳ ಸಾಧನೆಯಿಂದಾಗಿ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ. ಜಿಎಸ್ ಎಲ್ ವಿ ಮಾರ್ಕ್ 3 ಯಶಸ್ವಿ ಉಡಾವಣೆ ಮೂಲಕ ಮುಂದಿನ ಹಂತದ ಉಪಗ್ರಹ ಉಡಾವಣೆಗೆ ಭಾರತ ತನ್ನನ್ನು ತಾನು ತೊಡಗಿಸಿಕೊಳ್ಳುವಂತಾಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆ ವಿಶ್ವ ಸಮುದಾಯದ ಎದುರು ಭಾರತ ಹೆಮ್ಮೆ ಪಡುವಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೂ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಮೆಚ್ಚಿ ಟ್ವೀಟ್ ಮಾಡಿದ್ದು, ಇಸ್ರೋ ವಿಜ್ಞಾನಿಗಳ ಸಾಧನೆಗೆ ಹೃದಯ ಪೂರ್ವಕ ಶುಭಾಶಯ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲೇ ಇಂದು ಮಹತ್ವದ ದಿನವಾಗಿದ್ದು, ಬೃಹತ್ ಪ್ರಮಾಣದ ಸ್ಯಾಟೆಲೈಟ್ ಗಳನ್ನು ಉಡಾವಣೆ ಮಾಡಬಲ್ಲ ಮತ್ತು ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ನೆರವಾಗಬಲ್ಲ ಬೃಹತ್ ರಾಕೆಟ್ ಜಿಎಸ್ ಎಲ್ ವಿ ಮಾರ್ಕ್ 3 ಡಿ1 ನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ನಭಕ್ಕೆ ಚಿಮ್ಮಿದ ಜಿಎಸ್ ಎಲ್ ವಿ ಮಾರ್ಕ್ 3 ನೌಕೆ ತನ್ನೊಂದಿಗೆ ಬೃಹತ್ ಜಿಸ್ಯಾಟ್ 19 ಉಪಗ್ರಹವನ್ನು ಹೊತ್ತೊಯ್ದು ನಿಗದಿತ ಸಮಯದಲ್ಲಿ ನಿಗದಿತ ಕಕ್ಷೆಯನ್ನು ಸೇರಿಸಿದೆ. ಜಿಸ್ಯಾಟ್ 19 ಭಾರತದ ಅತೀ ದೊಡ್ಡ ಉಪಗ್ರಹವಾಗಿದ್ದು, ಈ ಹಿಂದೆ ಸಂಪರ್ವ ಸಂವಹನಕ್ಕಾಗಿ ಉಡಾವಣೆ ಮಾಡಲಾಗಿದ್ದ ಜಿಸ್ಯಾಟ್ ಸರಣಿಯ ಅತೀ ದೊಡ್ಡ ಉಪಗ್ರಹವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


