ದೇಶ

ಪಾಕಿಸ್ತಾನ ಗುಂಡು ಹಾರಿಸಿದರೆ ನಮ್ಮ ಸೇನೆ ಲೆಕ್ಕವಿಲ್ಲದಷ್ಟು ಬುಲೆಟ್ ಗಳನ್ನು ಹಾರಿಸುತ್ತದೆ: ರಾಜನಾಥ್ ಸಿಂಗ್

ಪದೇ ಪದೇ ಕಾಶ್ಮೀರದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿರುವ ಪಾಕಿಸ್ತಾನ ಒಂದು ವೇಳೆ ಮೊದಲು ಫೈರಿಂಗ್ ಆರಂಭಿಸಿದರೇ ಭಾರತೀಯ ಸೇನೆಯ ...

ಪಾಕಿಸ್ತಾನ ಗುಂಡು ಹಾರಿಸಿದರೆ ನಮ್ಮ ಸೇನೆ ಲೆಕ್ಕವಿಲ್ಲದಷ್ಟು ಬುಲೆಟ್ ಗಳನ್ನು ಹಾರಿಸುತ್ತದೆ: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Published On :
ಹಮೀರ್ ಪುರ್:  ಪದೇ ಪದೇ ಕಾಶ್ಮೀರದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿರುವ ಪಾಕಿಸ್ತಾನ ಒಂದು ವೇಳೆ ಮೊದಲು ಫೈರಿಂಗ್ ಆರಂಭಿಸಿದರೇ ಭಾರತೀಯ ಸೇನೆಯ ಬುಲೆಟ್ ಗಳನ್ನು ಲೆಕ್ಕಕ್ಕೆ ಇಡಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ  ಪಾಕಿಸ್ತಾನ ಶಾಂತಿ ಮತ್ತು ನೆಮ್ಮದಿ ಕದಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದೆ. ಆದರೆ ಇದು ದೀರ್ಘ ಕಾಲ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಪಾಕಿಸ್ತಾನ ಮೊದಲು ಫೈರಿಂಗ್ ಆರಂಭಿಸಿ, ಭಾರತೀಯ ಸೇನೆಗೆ ಅನುಮತಿ ನೀಡಿದ್ದಾದರೇ ನಮ್ಮ ಸೇನೆಯ ಬುಲೆಟ್ ಗಳನ್ನು ಲೆಕ್ಕ ಇಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಗ್ರನೊಬ್ಬ ಇಬ್ಬರು ಭಾರತೀಯ ಸೈನಿಕರನ್ನು ಕೊಂದ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.