ಆಗಸ್ಟ್ ವೇಳೆ ಗೆ ಜನರ ಕೈ ಸೇರಲಿದೆ ಹೊಸ 200 ರು. ನೋಟು!
ನೋಟು ನಿಷೇಧ ಕ್ರಮ ಘೊಷಣೆಯಾದ ಸುಮಾರು 9 ತಿಂಗಳ ನಂತರ ಹೊಸ 200 ರುಪಾಯಿ ಮುಖಬೆಲೆಯ ನೋಟು ಚಲಾವಣೆಗೆ ಬರಲು ಸಿದ್ಧವಾಗಿದ್ದು, ಇದೇ ಆಗಸ್ಟ್ ವೇಳೆಗೆ ಹೊಸ ನೋಟು ಜನರ ಕೈಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನವದೆಹಲಿ: ನೋಟು ನಿಷೇಧ ಕ್ರಮ ಘೊಷಣೆಯಾದ ಸುಮಾರು 9 ತಿಂಗಳ ನಂತರ ಹೊಸ 200 ರುಪಾಯಿ ಮುಖಬೆಲೆಯ ನೋಟು ಚಲಾವಣೆಗೆ ಬರಲು ಸಿದ್ಧವಾಗಿದ್ದು, ಇದೇ ಆಗಸ್ಟ್ ವೇಳೆಗೆ ಹೊಸ ನೋಟು ಜನರ ಕೈಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಹೊಸ 200 ರು. ಮುಖಬೆಲೆಯ ನೋಟುಗಳನ್ನು ಮುದ್ರಿಸುವ ಕಾರ್ಯಕ್ಕೆ ಆರ್ ಬಿಐ ಚಾಲನೆ ನೀಡಿದ್ದು, ಮೊದಲ ಭಾಗದ ಹೊಸ ನೋಟುಗಳು ಇದೇ ಆಗಸ್ಟ್ ವೇಳೆ ಚಲಾವಣೆಗೆ ಬರುವ ಸಾಧ್ಯತೆ ಇದೆ. 500 ರು. ಹಾಗೂ 2 ಸಾವಿರ ರು. ನೋಟುಗಳ ನಡುವಿನ ಅಂತರದಿಂದಾಗಿ ಉಂಟಾಗಿರುವ ಚಿಲ್ಲರೆ ಸಮಸ್ಯೆ ನಿವಾರಿಸುವುದಕ್ಕಾಗಿಯೇ ಆರ್ಬಿಐ 200 ರು. ಹೊಸ ನೋಟು ಬಿಡುಗಡೆಗೆ ನಿರ್ಧರಿಸಿದೆ ಎನ್ನಲಾಗಿದೆ. ಈ ಹಿಂದೆ 2017ವರ್ಷಾಂತ್ಯದಲ್ಲಿ ಹೊಸ 200 ರು. ನೋಟು ಚಲಾವಣೆಗೆ ತರುವ ಕುರಿತು ಸುದ್ದಿಗಳು ಹರಿದಾಡಿತ್ತಾದರೂ, ದಿನಗಳೆದಂತೆ ಚಿಲ್ಲರೆ ಸಮಸ್ಯೆ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಹೊಸ 200 ರು. ನೋಚುಗಳನ್ನು ಇನ್ನೂ ಬೇಗನೆ ಚಲಾವಣೆಗೆ ತರಲು ಆರ್ ಬಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನು ನೋಟು ನಿಷೇಧವಾದ ಬಳಿಕ ಚಿಲ್ಲರೆ ಅಭಾವದಿಂದಾಗಿ ದಿನಕಳೆದಂತೆ 2,000 ರು. ನೋಟು ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಹಕರು ಬ್ಯಾಂಕುಗಳಲ್ಲಿ ಕಡಿಮೆ ಮುಖಬೆಲೆ ನೋಟುಗಳನ್ನೇ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಇದೇ ಕಾರಣಕ್ಕೆ ಆಗಸ್ಟ್ ತಿಂಗಳ ಅವಧಿಯಲ್ಲೇ ಹೊಸ 200 ರು. ನೋಟುಗಳನ್ನು ಚಲಾವಣೆಗೆ ತರಲು ಆರ್ ಬಿಐ ಮುಂದಾಗಿದೆ.
ಹೊಸ 200ರು ಮುಖಬೆಲೆಯ ನೋಟು ಎಟಿಎಂಗಳಲ್ಲಿ ಲಭ್ಯವಾಗುವುದಿಲ್ಲ!
ಏತನ್ಮಧ್ಯೆ ಹೊಸ ನೋಟಿನ ಚಲಾವಣೆ ಕುರಿತು ದಿನಕ್ಕೊಂದು ಸುದ್ದಿ ಹರಿದಾಡುತ್ತಿದ್ದು, ಪ್ರಸ್ತುತ ಬಿಡುಗಡೆಯಾಗುತ್ತಿರುವ ಹೊಸ 200 ರು. ಮುಖಬೆಲೆಯ ನೋಟುಗಳು ಎಟಿಎಂ ಗಳಲ್ಲಿ ಲಭ್ಯವಿರುವುದಿಲ್ಲವಂತೆ. ಹೀಗೆಂದು ಕೆಲ ಪತ್ರಿಕೆಗಳು ಸುದ್ದಿ ಬಿತ್ತರಿಸಿದ್ದು, ಹೊಸ ನೋಟುಗಳನ್ನು ನೇರವಾಗಿ ಬ್ಯಾಂಕ್ ಅಥವಾ ಆರ್ ಬಿಐ ಕಚೇರಿಗಳಿಂದಲೇ ಪಡೆಯಬೇಕು ಎಂದು ಸುದ್ದಿಗಳಲ್ಲಿ ತಿಳಿಸಲಾಗಿದೆ. ಆದರೆ ಈ ಬಗ್ಗೆ ಆರ್ ಬಿಐ ಆಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


