ದೇಶ

ವೈಯಕ್ತಿಕ ರಾಜಕೀಯ ಉದ್ದೇಶದಿಂದ ಕೋಮುವಾದಿಗಳೊಂದಿಗೆ ನಿತೀಶ್ ಕೈ ಜೋಡಿಸಿದ್ದಾರೆ: ರಾಹುಲ್

ವೈಯಕ್ತಿಕ ರಾಜಕೀಯ ಉದ್ದೇಶದಿಂದ ಕೋಮುವಾದಿಗಳೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೈಜೋಡಿಸಿದ್ದಾರೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು...

ವೈಯಕ್ತಿಕ ರಾಜಕೀಯ ಉದ್ದೇಶದಿಂದ ಕೋಮುವಾದಿಗಳೊಂದಿಗೆ ನಿತೀಶ್ ಕೈ ಜೋಡಿಸಿದ್ದಾರೆ: ರಾಹುಲ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Published On :
ನವದೆಹಲಿ: ವೈಯಕ್ತಿಕ ರಾಜಕೀಯ ಉದ್ದೇಶದಿಂದ ಕೋಮುವಾದಿಗಳೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೈಜೋಡಿಸಿದ್ದಾರೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ. 
ಆರ್ ಜೆಡಿ ಜೊತೆ ಮೈತ್ರಿ ಕಡಿದುಕೊಂಡು ಬಿಜೆಪಿ ಜೊತೆ ಸೇರಿ ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಸರ್ಕಾರ ರಚನೆ ಮಾಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕೋಮುವಾದಿಗಳ ವಿರುದ್ಧ ನಿಂತು ಕೋಮುವಾದಿಗಳಿಗೆ ದಿಟ್ಟ ಉತ್ತರ ನೀಡುವ ಸಲುವಾಹಿ ಬಿಹಾರ ಜನತೆ ನಿತೀಶ್ ಕುಮಾರ್ ಅವರನ್ನು ಆರಿಸಿತ್ತು. ಆದರೆ, ಇದೀಗ ಸ್ವತಃ ನಿತೀಶ್ ಅವರೇ ವೈಯಕ್ತಿಕ ರಾಜಕೀಯಗಳಿಂದಾಗಿ ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆಂದು ಹೇಳಿದ್ದಾರೆ. 
ಬಿಹಾರದಲ್ಲಿ ನಡೆಯುತ್ತಿರುವ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತಂತೆ ಸತ್ಯ ಹೇಳುವುದಾದರೆ, ಇದೆಲ್ಲದರ ಯೋಜನೆಗಳು 3-4 ತಿಂಗಳ ಹಿಂದಿನಿಂದಲೂ ನಡೆಯುತ್ತಿತ್ತು ಎಂಬುದು ನಮಗೆ ತಿಳಿದಿತ್ತು. ಸ್ವ ಹಿತಾಸಕ್ತಿಗಾಗಿ ಒಬ್ಬ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ, ಇದರಲ್ಲಿ ಯಾವುದೇ ವಿಶ್ವಾಸಾರ್ಹತೆ ಹಾಗೂ ನಿಯಮಗಳಿರುವುದಿಲ್ಲ ಎಂದು ತಿಳಿಸಿದ್ದಾರೆ.
ಕಳೆದ 2 ವರ್ಷಗಳಲ್ಲಿ ನಿತೀಶ್ ಕುಮಾರ್ ಅವರ ಎರಡನೇ ಅಧಿಕಾರದ ಅವಧಿ ಇದಾಗಿದೆ. ಮಹಾ ಮೈತ್ರಿಕೂಟದ ಭ್ರಷ್ಟ ನಾಯಕರೊಂದಿಗೆ ತನ್ನನ್ನು ಗುರ್ತಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಅವರೊಂದಿಗೆ ಸರ್ಕಾರ ಕೂಡಿಕೊಂಡು ಕೆಲಸ ಮಾಡುವುದು ಸಾಧ್ಯವಿಲ್ಲ ಎಂದ ಸಂದೇಶವನ್ನು ರವಾನಿಸಿದ್ದ ನಿತೀಶ್ ಅವರು ನಿನ್ನೆ ಹಠಾತ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. 
ಆರ್ ಜೆಡಿ ಸ್ನೇಹದಿಂದ ಹೊರ ಬಂದ ನಿತೀಶ್ ಕುಮಾರ್ ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು. ಈ ಹಿನ್ನಲೆಯಲ್ಲಿ ಸರ್ಕಾರ ರಚನೆಗೆ ಬಿಹಾರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರು ನಿತೀಶ್ ಕುಮಾರ್ ಅವರಿಗೆ ಆಹ್ವಾನ ನೀಡಿದ್ದರು. ಅದರಂತೆ ಇಂದು ಬೆಳಗ್ಗೆ 10 ಗಂಟೆಗೆ ಪಾಟ್ನಾದ ರಾಜಭವನಕ್ಕೆ ಆಗಮಿಸಿದ ನಿತೀಶ್ ಕುಮಾರ್ ಹಾಗೂ ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.