ಪೆರೋಲ್ ನಿಯಮ ಉಲ್ಲಂಘಿಸಿದ್ದರೆ ಸಂಜಯ್ ದತ್ ರನ್ನು ಜೈಲಿಗೆ ಕಳಿಸಿ: ಮಹಾರಾಷ್ಟ್ರ ಸರ್ಕಾರ
1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟ ಸಂಜಯ್ ದತ್ ಗೆ...

Published On :
ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟ ಸಂಜಯ್ ದತ್ ಗೆ ಪರೋಲ್ ನೀಡುವಾಗ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಅನಿಸಿದರೆ ಅವರನ್ನು ಮತ್ತೆ ಜೈಲಿಗೆ ಕಳುಹಿಸಲು ತನ್ನದೇನು ಆಕ್ಷೇಪವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಮುಂಬೈ ಹೈಕೋರ್ಟ್ ಗೆ ತಿಳಿಸಿದೆ.
ಸಂಜಯ್ ದತ್ ಗೆ ಉತ್ತಮ ನಡತೆ ತೋರಿಸಲು ನಿಗದಿಪಡಿಸಿದ್ದ ಮಾನದಂಡಗಳೇನು ಎಂದು ವಿವರಿಸಿ ಹೊಸ ಅಫಿಡವಿಟ್ಟನ್ನು ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಸರ್ಕಾರಕ್ಕೆ ಹೇಳಿದೆ.
1993ರ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ಸಂಜಯ್ ದತ್ ಅವರನ್ನು ಅವಧಿಗಿಂತ 8 ತಿಂಗಳು ಮೊದಲು ಬಿಡುಗಡೆ ಮಾಡಲು ಕಾರಣವೇನು ಎಂದು ತಿಳಿಸುವಂತೆ ಮುಂಬೈ ಹೈಕೋರ್ಟ್ ಕಳೆದ ತಿಂಗಳು 12ರಂದು ಮಹಾರಾಷ್ಟ್ರ ಸರ್ಕಾರವನ್ನು ಕೇಳಿತ್ತು. ಅಲ್ಲದೆ ದತ್ ಅವರ ಯಾವ ಗುಣನಡತೆಯನ್ನು ಉತ್ತಮವೆಂದು ಅಳೆಯಲಾಗಿದೆ. ಪರೋಲ್ ನಲ್ಲಿರುವಾಗ ಅವರನ್ನು ಅವಧಿಗಿಂತ ಮೊದಲು ಹೇಗೆ ಬಿಡುಗಡೆ ಮಾಡಲಾಯಿತು ಎಂದು ಕೋರ್ಟ್ ಕೇಳಿತ್ತು.
ವಿಚಾರಣೆಯ ಸಂದರ್ಭದಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿದ್ದ ಸಂಜಯ್ ದತ್ 2013ರ ಮೇ ತಿಂಗಳಲ್ಲಿ, ಸುಪ್ರೀಂ ಕೋರ್ಟ್ ಅವರ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದ್ದರಿಂದ ಶರಣಾಗಿದ್ದರು.
ನಂತರ 2016ರಲ್ಲಿ ಅವಧಿಗಿಂತ 8 ತಿಂಗಳು ಮೊದಲೇ ದತ್ ಜೈಲಿನಲ್ಲಿ ಉತ್ತಮ ಗುಣನಡತೆ ತೋರಿಸಿದ್ದರು ಎಂದು ಬಿಡುಗಡೆಯಾಗಿದ್ದರು. ಅವರು ಪುಣೆಯ ಯೆರವಾಡ ಜೈಲಿನಲ್ಲಿ ಕೈದಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bombay High Courtಬಾಂಬೆ ಹೈಕೋರ್ಟ್Sanjay Duttparoleಸಂಜಯ್ ದತ್Maharashtra governmentಪೆರೋಲ್ಮಹಾರಾಷ್ಟ್ರ ಸರ್ಕಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


