ಮಾನನಷ್ಟ ಮೊಕದ್ದಮೆ ಪ್ರಕರಣ: ಕೇಜ್ರಿವಾಲ್ ವಿರುದ್ಧ 'ಹೈ' ಗುಡುಗು, ಮಾನಹಾನಿಕರ ಪ್ರಶ್ನೆ ಕೇಳದಂತೆ ಸೂಚನೆ
ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ಹೂಡಿದ್ದ 2ನೇ ಮಾನಹಾನಿ ದಾವೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ದೆಹಲಿ ನ್ಯಾಯಾಲಯ ಗುಡುಗಿದ್ದು, ಜೇಟ್ಲಿ ಬಗ್ಗೆ ಮಾನಹಾನಿಕರ ಪ್ರಶ್ನೆ ಕೇಳದಂತೆ ಬುಧವಾರ...

Published On :
ನವದೆಹಲಿ: ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ಹೂಡಿದ್ದ 2ನೇ ಮಾನಹಾನಿ ದಾವೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ದೆಹಲಿ ನ್ಯಾಯಾಲಯ ಗುಡುಗಿದ್ದು, ಜೇಟ್ಲಿ ಬಗ್ಗೆ ಮಾನಹಾನಿಕರ ಪ್ರಶ್ನೆ ಕೇಳದಂತೆ ಬುಧವಾರ ಸೂಚನೆ ನೀಡಿದೆ.
ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ಕೇಜ್ರಿವಾಲ್ ಹಾಗೂ ಇತರ ಕೆಲವು ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ರೂ.10 ಕೋಟಿ ಮಾನಹಾನಿ ದಾವೆ ಹೂಡಿದ್ದು, ಇದರ ವಿಚಾರಣೆ ನಿನ್ನೆ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ನಡೆದಿದೆ.
ವಿಚಾರಣೆ ವೇಳೆ ಇತ್ತೀಚೆಗೆ ಜೇಟ್ಲಿಯವರನ್ನು ಜೇಠ್ಮಲಾನಿಯವರು ಮೋಸಗಾರ ಎಂದು ಜರಿದಿದ್ದರು. ಈ ಹೇಳಿಕೆ ನನ್ನದಲ್ಲ. ನನ್ನ ಕಕ್ಷಿದಾರ ಕೇಜ್ರಿವಾಲ್ ಅವರು ಆಡಿದ ನುಡಿ ಎಂದು ಜೇಠ್ಮಲಾನಿಯವರು ಸ್ಪಷ್ಟಪಡಿಸಿದ್ದರು. ನಂತರ ಜೇಟ್ಲಿಯವರು ಈ ಪದ ಬಳಕೆಯ ವಿರುದ್ಧವೂ ಮತ್ತೊಂದು ಮಾನಹಾನಿ ದಾವೆ ದಾಖಲಿಸಿದ್ದರು.
ಬಳಿಕ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದ ಕೇಜ್ರಿವಾಲ್ ಅವರು, ನಾನು ಜೇಠ್ಮಲಾನಿಯವರಿಗೆ ಯಾವತ್ತೂ ಮೋಸಗಾರ ಪದವನ್ನು ಜೇಟ್ಲಿ ಬಗ್ಗೆ ಬಳಸುವಂತೆ ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇದರಿಂದ ಕೇಜ್ರಿವಾಲ್ ವಿರುದ್ಧ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಜೇಠ್ಮಲಾನಿಯವರು ನಾನು ಇನ್ನು ಕೇಜ್ರಿವಾಲ್ ಅವರನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಮಾನಹಾನಿ ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಾಲಯವು, ಜೇಟ್ಲಿಯವರು ಹೂಡಿದ್ದ 2ನೇ ಮಾನಹಾನಿ ದಾವೆಗೆ ಸಂಬಂಧಿಸಿದಂತೆ ರೂ.10 ಸಾವಿರ ಕೋರ್ಟ್ ಕಲಾಪದ ವೆಚ್ಚವನ್ನು ದೆಹಲಿ ಸಿಎಂ ಕೇಜ್ರಿವಾಲ್ ಮೇಲೆಯೇ ಹೊರಿಸಿದೆ.
ಕೇಜ್ರಿವಾಲ್ ಪರ ವಕೀಲರು ಪ್ರಕಱಣದ ಬಗ್ಗೆ ಪ್ರತಿಕ್ರಿಯಿಸಲು ಮತ್ತೆರಡು ವಾರ ಕಾಲಾವಕಾಶ ಕೇಳಿದ್ದರು. ಈ ಹಿನ್ನಲೆಯಲ್ಲಿ 2 ವಾರ ಅವಕಾಶ ನೀಡಿದ ನ್ಯಾಯಾಲಯ, ಕಲಾಪದ ವೆಚ್ಚವೆಂದು ರೂ.10 ಸಾವಿರ ಠೇವಣಿ ಇಡುವಂತೆ ಸೂಚಿಸಿದೆ.
ಅಲ್ಲದೆ, ಸಂವಿಧಾನದ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ಮಾನಹಾನಿ ಹಾಗೂ ನಿಂದನಾತ್ಮಕ ಭಾಷಣೆಗಳನ್ನು ಬಳಕೆ ಮಾಡಿವುದರೆ ಸಾಮಾನ್ಯ ಜನರ ಮನಸ್ಥಿತಿ ಮೇಲೆ ಅದು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಪ್ರಶ್ನೆಸಿರುವ ನ್ಯಾಯಾಲಯವು, ಜೇಟ್ಲಿ ಬಗ್ಗೆ ಮಾನಹಾನಿಕರ ಪ್ರಶ್ನೆ ಕೇಳದಂತೆ ಸೂಚನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arun Jaitleyಅರುಣ್ ಜೇಟ್ಲಿDelhi High Courtದೆಹಲಿ ಹೈಕೋರ್ಟ್Kejriwalಕೇಜ್ರಿವಾಲ್ಮಾನನಷ್ಟ ಮೊಕದ್ದಮೆDefamation Case
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


