ಘಟ್ಕೋಪರ್ ಕಟ್ಟಡ ಕುಸಿತ ಪ್ರಕರಣ: ಮುಂಬಯಿಯಲ್ಲಿ ಶಿವಸೇನೆ ಮುಖಂಡ ಸುನಿಲ್ ಶೆತಾಪ್ ಬಂಧನ
ಘಾಟ್ಕೊಪರ್‌ನಲ್ಲಿ ಮಂಗಳವಾರ 4 ಅಂತಸ್ತಿನ ವಸತಿ ಕಟ್ಟಡ ಕುಸಿದು 17 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ...

Published On :
ಮುಂಬಯಿ: ಘಾಟ್ಕೊಪರ್‌ನಲ್ಲಿ ಮಂಗಳವಾರ 4 ಅಂತಸ್ತಿನ ವಸತಿ ಕಟ್ಟಡ ಕುಸಿದು 17 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಶಿವಸೇನಾ ಮುಖಂಡ ಸುನಿಲ್ ಶೆತಾಪ್ ಅವರನ್ನು ಬಂಧಿಸಿದ್ದಾರೆ.
ಕಟ್ಟಡದಲ್ಲಿ ಕಾನೂನು ಬಾಹಿರವಾಗಿ ರಿಪೇರಿ ಕಾಮಗಾರಿ ಮಾಡಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಈ ಕಟ್ಟಡದ ನೆಲ ಮಹಡಿಯಲ್ಲಿ ನರ್ಸಿಂಗ್ ಹೋಮ್ ಇದೆ. ಶೆತಾಪ್ ಗೆ ಸೇರಿದ ಈ ನರ್ಸಿಂಗ್ ಹೋಮ್ ರಿಪೇರಿ ನಡೆಸಲಾಗುತ್ತಿತ್ತು, ಭಾರತೀಯ ದಂಡ ಸಂಹಿತೆ ಅನ್ವಯ ಶೆತಾಪ್ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಮಂಗಳವಾರ ಬೆಳಗ್ಗೆ 7 ಗಂಟೆಗೆ ಆತನನ್ನು ಬಂಧಿಸಿ ಕಳೆದ ರಾತ್ರಿ ಸುಮಾರು 3 ತಾಸುಗಳ ಕಾಲ ವಿಚಾರಣೆಗೊಳಪಡಿಸಲಾಯಿತು.
ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿ 28 ಮಂದಿಯನ್ನುಅವಶೇಷಗಳ ಅಡಿಯಿಂದ ರಕ್ಷಿಸಲಾಗಿದೆ. 11 ಮಂದಿ ಗಂಭೀರ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 35 ವರ್ಷ ಹಳೆಯ ಸಾಯಿದರ್ಶನ್ ಅಪಾರ್ಟ್‌ಮೆಂಟ್ ನಿನ್ನೆ ಬೆಳಗ್ಗೆ 10.45ರ ವೇಳೆಗೆ ಕುಸಿತಗೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


