ದೇಶ

ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಇಂದು ಅಧಿಕಾರ ಸ್ವೀಕಾರ

ಬಿಹಾರದ ಮಾಜಿ ರಾಜ್ಯಪಾಲ ಬಿಜೆಪಿಯಿಂದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿರುವ ಮೊದಲ ನೇತಾರ ರಾಮನಾಥ ಕೋವಿಂದ್ ಮಂಗಳವಾರ ದೇಶದ 14ನೇ ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಇಂದು ಅಧಿಕಾರ ಸ್ವೀಕಾರ
ಸಂಗ್ರಹ ಚಿತ್ರ
Published On :

ನವದೆಹಲಿ: ಬಿಹಾರದ ಮಾಜಿ ರಾಜ್ಯಪಾಲ ಬಿಜೆಪಿಯಿಂದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿರುವ ಮೊದಲ ನೇತಾರ ರಾಮನಾಥ ಕೋವಿಂದ್ ಮಂಗಳವಾರ ದೇಶದ 14ನೇ ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮಂಗಳವಾರ ಮಧ್ಯಾಹ್ನ ದೇಶದ 14ನೇ ರಾಷ್ಟ್ರಪತಿಯಾಗಿ ಕೋವಿಂದ್ ಪ್ರಮಾಣವಚನ ಸ್ವೀಕರಿಸಲಿದ್ದು, ಸಂಸತ್ ​ನ ಸೆಂಟ್ರಲ್ ಹಾಲ್​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.  ಖೇಹರ್, ಕೋವಿಂದ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಮೂಲಗಳ ಪ್ರಕಾರ ಇಂದು ಮಧ್ಯಾಹ್ಮ 12.15 ರಾಮನಾಥ್ ಕೋವಿಂದ್ ಪ್ರಮಾಣ ವಚನ ಸ್ವೀಕರಿಸಲಿದ್ದು, ಬಳಿಕ ಮಾಜಿ ಪ್ರಣಬ್ ಮುಖರ್ಜಿ ಅವರು ಕೋವಿಂದಗೆ ರಾಷ್ಟ್ರಪತಿ ಭವನ ಪರಿಚಯಿಸಲಿದ್ದಾರೆ. ಪ್ರಮಾಣವಚನ  ಸ್ವೀಕಾರದ ನಂತರದಲ್ಲಿ ಹೊರಗೆ ರಕ್ಷಣಾ ಸಿಬ್ಬಂದಿ 21 ಸುತ್ತು ಕುಶಾಲು ತೋಪು ಸಿಡಿಸಲಿದ್ದಾರೆ. ಬಳಿಕ 340 ದರ್ಬಾರ್ ಹಾಲ್​ನಲ್ಲಿರುವ ಸಿಂಹಾಸನದಲ್ಲಿ ಸಾಂಕೇತಿಕವಾಗಿ ಕೋವಿಂದರನ್ನು ಕೂರಿಸಿ ಅಧಿಕಾರ  ಹಸ್ತಾಂತರಿಸಲಾಗುತ್ತದೆ.

ಇಂದಿನ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸೆಂಟ್ರಲ್ ಹಾಲ್​ನಲ್ಲಿ ರಾಜ್ಯ ಸಭಾಧ್ಯಕ್ಷ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ,  ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಜೆಎಸ್ ಖೆಹರ್,  ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಸಚಿವ ಸಂಪುಟದ ಸದಸ್ಯರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ರಾಜತಾಂತ್ರಿಕ  ಮುಖ್ಯಸ್ಥರು, ಸಂಸತ್ ಸದಸ್ಯರು, ಸಚಿವಾಲಯದ ಉನ್ನತಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಕೋವಿಂದ ಅವರನ್ನು ರಾಷ್ಟ್ರಪತಿ ಭವನದ ಮುಂಭಾಗಕ್ಕೆ ರಾಷ್ಟ್ರಪತಿಗಳ ಸೇನಾ ಕಾರ್ಯದರ್ಶಿ ಕರೆತಂದ ಬಳಿಕ ಅಲ್ಲಿಂದ ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಹಾಗೂ ಕೋವಿಂದ ಒಂದೇ ಕಾರಿನಲ್ಲಿ ಸಂಸತ್​ ಗೆ ತೆರಳುತ್ತಾರೆ.  ಸಂಸತ್​ನಲ್ಲಿ ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ, ಲೋಕಸಭಾ ಸ್ಪೀಕರ್ ಕೋವಿಂದ-ಪ್ರಣಬ್ ಅವರನ್ನು ಸೆಂಟ್ರಲ್ ಹಾಲ್​ಗೆ ಕರೆದೊಯ್ಯುತ್ತಾರೆ. ಸಿಜೆಐ ಖೆಹರ್ ಅವರು ನೂತನ ರಾಷ್ಟ್ರಪತಿಗೆ ಪ್ರಮಾಣವಚನ  ಬೋಧಿಸಲಿದ್ದಾರೆ.

ಬಳಿಕ ನೂತನ ರಾಷ್ಟ್ರಪತಿಗಳು ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ನಂತರ ರಾಷ್ಟ್ರಪತಿ ಕೋವಿಂದರನ್ನು ಅಂಗರಕ್ಷಕರು ರಾಷ್ಟ್ರಪತಿ ಭವನಕ್ಕೆ ಕರೆದೊಯ್ಯಲಿದ್ದಾರೆ. ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು  ಕೋವಿಂದಗೆ ರಾಷ್ಟ್ರಪತಿ ಭವನವನ್ನು ಪರಿಚಯಿಸಲಿದ್ದಾರೆ. ಆನಂತರ ದರ್ಬಾರ್ ಹಾಲ್​ನಲ್ಲಿರುವ ಸಿಂಹಾಸನದಲ್ಲಿ ಸಾಂಕೇತಿಕವಾಗಿ ಕೋವಿಂದರನ್ನು ಕುಳ್ಳಿರಿಸುವ ಮೂಲಕ ಅಧಿಕಾರ ಹಸ್ತಾಂತರಿಸಲಾಗುತ್ತದೆ.

ಅಂತಿಮವಾಗಿ ಕೋವಿಂದ ಅವರು ಪ್ರಣಬ್​ ಗೆ ನಿಗದಿಗೊಳಿಸಲಾಗಿರುವ 10, ರಾಜಾಜಿ ಮಾರ್ಗದಲ್ಲಿರುವ ನೂತನ ನಿವಾಸಕ್ಕೆ ಅವರನ್ನು ಬಿಟ್ಟು ರಾಷ್ಟ್ರಪತಿ ಭವನಕ್ಕೆ ವಾಪಸಾಗಲಿದ್ದಾರೆ. ಆನಂತರ ನೂತನ ರಾಷ್ಟ್ರಪತಿ  ಕೋವಿಂದರನ್ನು ಅಂಗರಕ್ಷಕರು ಅಧಿಕೃತ ನಿವಾಸಕ್ಕೆ ಕರೆದೊಯ್ಯಲಿದ್ದಾರೆ. ಪ್ರಣಬ್ ಸಹ ಜತೆಗೆ ತೆರಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.