ದೇಶ

ಭಾರತದಲ್ಲಿರುವ ಪಾಕ್ ಹೈಕಮಿಷನರ್ ನಿವೃತ್ತಿ: ಸೊಹೈಲ್ ಮಹಮೂದ್ ನೇಮಕ

ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ ಅವಧಿಗೂ ಮುನ್ನವೇ ನಿವೃತ್ತರಾಗುತ್ತಿದ್ದು ನೂತನ ಹೈಕಮಿಷನರ್ ಆಗಿ ಸೊಹೈಲ್ ಮಹಮೂದ್ ನ್ನು ನೇಮಕ ಮಾಡಲಾಗಿದೆ.

ಭಾರತದಲ್ಲಿರುವ ಪಾಕ್ ಹೈಕಮಿಷನರ್ ನಿವೃತ್ತಿ: ಸೊಹೈಲ್ ಮಹಮೂದ್ ನೇಮಕ
ಅಬ್ದುಲ್ ಬಸಿತ್
Published On :
ನವದೆಹಲಿ: ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ ಅವಧಿಗೂ ಮುನ್ನವೇ ನಿವೃತ್ತರಾಗುತ್ತಿದ್ದು ನೂತನ ಹೈಕಮಿಷನರ್ ಆಗಿ ಸೊಹೈಲ್ ಮಹಮೂದ್ ನ್ನು ನೇಮಕ ಮಾಡಲಾಗಿದೆ. 
ಅಬ್ದುಲ್ ಬಸೀತ್ ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ರಾಜೀನಾಮೆ ನೀಡಿದ್ದು, ಪಾಕ್ ಪ್ರಧಾನಿ ಅಬ್ದುಲ್ ಬಸಿತ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿದ್ದು, ಸೊಹೈಲ್ ಮಹಮೂದ್ ನ್ನು ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ. 
2018 ರಲ್ಲಿ ನಿವೃತ್ತರಾಗಬೇಕಿದ್ದ ಅಬ್ದುಲ್ ಬಸೀತ್ ಅವಧಿಗೂ ಮುನ್ನವೇ ನಿವೃತ್ತರಾಗುತ್ತಿದ್ದಾರೆ, ಪಾಕ್ ಮಾಧ್ಯಮಗಳ ಪ್ರಕಾರ ಅಬ್ದುಲ್ ಬಸಿತ್ ತಮಗಿಂತಲೂ ಕಿರಿಯರಾದ ತೆಹ್ಮಿನಾ ಜನುವಾ ಅವರನ್ನು ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದಕ್ಕೆ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.