ದೇಶ

ಅತ್ಯಾಚಾರ ಪ್ರಕರಣ: ಬಂಧಿತ ಕೇರಳ 'ಕೈ' ಶಾಸಕನಿಗೆ ಅಮಾನತು ಶಿಕ್ಷೆ

ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಕೇರಳ ಶಾಸಕ ಎಂ.ವಿನ್ಸೆಂಟ್ ಅವರನ್ನು ಪಕ್ಷ ಮತ್ತು ಪಕ್ಷದ ಹುದ್ದೆಗಳಿಂದ ಕಾಂಗ್ರೆಸ್ ಅಮಾನತು ಮಾಡಿದೆ...

ಅತ್ಯಾಚಾರ ಪ್ರಕರಣ: ಬಂಧಿತ ಕೇರಳ 'ಕೈ' ಶಾಸಕನಿಗೆ ಅಮಾನತು ಶಿಕ್ಷೆ
ಎಂ.ವಿನ್ಸೆಂಟ್
Published On :
ತಿರುವನಂತಪುರ: ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಕೇರಳ ಶಾಸಕ ಎಂ.ವಿನ್ಸೆಂಟ್ ಅವರನ್ನು ಪಕ್ಷ ಮತ್ತು ಪಕ್ಷದ ಹುದ್ದೆಗಳಿಂದ ಕಾಂಗ್ರೆಸ್ ಅಮಾನತು ಮಾಡಿದೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇರಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಂ.ಎಂ. ಹಸ್ಸನ್, ಶಾಸಕರ ವಿರುದ್ಧದ ಅತ್ಯಾಚಾರ ಆರೋಪ ರಾಜಕೀಯ ಪಿತೂರಿಯಾಗಿದೆ. ಆದರೆ, ಮಹಿಳೆಯ ದೂರನ್ನು ಆಧರಿಸಿ ವಿನ್ಸೆಂಟ್ ಅವರನ್ನು ಪಕ್ಷದ ಕಾರ್ಯದರ್ಶಿ ಸ್ಥಾನದಿಂದ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ. 
ವಿನ್ಸೆಂಟ್ ಅವರು ನಿರ್ದೋಷಿ ಎಂದು ಪ್ರಕಟಗೊಳ್ಳುವವರೆಗೂ ಅಮಾನತು ಶಿಕ್ಷೆ ಜಾರಿಯಲ್ಲಿರಲಿದೆ. ಪ್ರಕರಣ ಸಂಬಂಧ ಈಗಾಗಲೇ ವಿನ್ಸೆಂಟ್ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಪ್ರಕರಣದಲ್ಲಿ ತಾವು ನಿರ್ದೋಷಿ ಎಂದು ಸಾಬೀತು ಪಡಿಸುತ್ತೇನೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ನ್ಯಾಯಾಲಯ ವಿನ್ಸೆಂಟ್ ದೋಷಿಯೆಂದು ಪ್ರಕಟಿಸಿದ್ದೇ ಆದರೆ, ಮುಂದಿನ ಕ್ರಮಗಳನ್ನು ಪಕ್ಷ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.