ನಿವೃತ್ತಿ ನಂತರ ಲುಟಿನ್ಸ್ ದೆಹಲಿಯ ಬಂಗಲೆಯಲ್ಲಿ ಪ್ರಣಬ್ ದಾ ವಾಸ್ತವ್ಯ
ರಾಷ್ಟ್ರಪತಿ ಅವಧಿ ಪೂರೈಸಿ ನಿವೃತ್ತರಾದ ಬಳಿಕ ಪ್ರಣಬ್ ಮುಖರ್ಜಿ ಲುಟಿನ್ಸ್ ದೆಹಲಿಯ ಬಂಗಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

Published On :
ನವದೆಹಲಿ: ರಾಷ್ಟ್ರಪತಿ ಅವಧಿ ಪೂರೈಸಿ ನಿವೃತ್ತರಾದ ಬಳಿಕ ಪ್ರಣಬ್ ಮುಖರ್ಜಿ ಲುಟಿನ್ಸ್ ದೆಹಲಿಯ ಬಂಗಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ರಾಷ್ಟ್ರಪತಿ ಭವನದಿಂದ ಹೊರಬಂದ ನಂತರ ರಾಜಾಜಿ ಮಾರ್ಗ್ ನಲ್ಲಿರುವ ಬಂಗಲೆ ಪ್ರಣಬ್ ಮುಖರ್ಜಿ ಅವರ ಹೊಸ ವಾಸಸ್ಥಾನವಾಗಲಿದ್ದು, ಎರಡು ಅಂತಸ್ತಿನ ವಿಲ್ಲಾ 8 ರೂಂಗಳನ್ನು, ಗ್ರಂಥಾಲಯವನ್ನು ಹೊಂದಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೂ ಸಹ ರಾಷ್ಟ್ರಪತಿ ಹುದ್ದೆಯ ಅವಧಿಯನ್ನು ಪೂರ್ಣಗೊಳಿಸಿ ನಿವೃತ್ತರಾದ ಬಳಿಕ, 2015 ರಲ್ಲಿ ನಿಧನರಾಗುವವರೆಗೂ ಇದೇ ಬಂಗಲೆಯಲ್ಲಿ ವಾಸವಿದ್ದರು.
ಅಬ್ದುಲ್ ಕಲಾಂ ನಂತರ ಬಿಜೆಪಿ ಸಂಸದ, ಕೇಂದ್ರ ಸಂಸ್ಕೃತಿ ಇಲಾಖೆ ಸಚಿವ ಮಹೇಶ್ ಶರ್ಮಾ ಈ ಬಂಗಲೆಯಲ್ಲಿದ್ದರು, ಈಗ ಅವರು 10 ಅಕ್ಬರ್ ರಸ್ತೆಯಲ್ಲಿರುವ ಬಂಗಲೆಗೆ ವಾಸ್ತವ್ಯವನ್ನು ಸ್ಥಳಾಂತರಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


