ದೇಶ

ಸೆಪ್ಟೆಂಬರ್ ನಿಂದ ಪ್ರತಿ ತಿಂಗಳು 18ರಂದು ಸ್ವಯಂಸೇವಕರ ಸಭೆ: ಮಾಯಾವತಿ

ಉತ್ತರ ಪ್ರದೇಶದ 18 ವಿಭಾಗಗಳಲ್ಲಿ ಸೆಪ್ಟೆಂಬರ್ 18ರಂದು ಸಭೆ ಸೇರುವ ಮೂಲಕ ಪ್ರತಿ ತಿಂಗಳು 18ನೇ...

ಸೆಪ್ಟೆಂಬರ್ ನಿಂದ ಪ್ರತಿ ತಿಂಗಳು 18ರಂದು ಸ್ವಯಂಸೇವಕರ ಸಭೆ: ಮಾಯಾವತಿ
ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ
Published On :
ನವದೆಹಲಿ: ಉತ್ತರ ಪ್ರದೇಶದ 18 ವಿಭಾಗಗಳಲ್ಲಿ ಸೆಪ್ಟೆಂಬರ್ 18ರಂದು ಸಭೆ ಸೇರುವ ಮೂಲಕ ಪ್ರತಿ ತಿಂಗಳು 18ನೇ ತಾರೀಖಿನಂದು  ಸ್ವಯಂಸೇವಕರ  ಸಭೆ ನಡೆಸಲಾಗುವುದು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 18ನೇ ತಾರೀಖಿನಂದು ತಾವು ರಾಜ್ಯಸಭೆಗೆ ರಾಜೀನಾಮೆ ನೀಡಿದ್ದು ಆ ದಿನವನ್ನು ಪಕ್ಷದ ಕಾರ್ಯಕರ್ತರು ಮರೆಯಲು ಸಾಧ್ಯವಿಲ್ಲ.ಹೀಗಾಗಿ ಆ ತಾರೀಖನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಹೇಳಿದರು.
ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ದಿನದಂದು ಪ್ರತಿ ಪ್ರದೇಶದಲ್ಲಿ ವಿವಿಧ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಲಾಗುವುದು. ಮೊದಲ ರ್ಯಾಲಿಯನ್ನು ಮೀರತ್-ಸಹರಾನ್ ಪುರದಲ್ಲಿ ನಡೆಸಲಾಗುವುದು. ಮುಂದಿನ ವರ್ಷ ಜೂನ್ ನಂತರ ಕಾರ್ಯಕ್ರಮಗಳನ್ನು ಘೋಷಿಸಲಾಗುವುದು ಎಂದು ಹೇಳಿದರು.
ಕಳೆದ ವಾರ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ಮಾಯಾವತಿಯವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.