ದೇಶ

ಲಾಲೂ ವಿಐಪಿ ಸವಲತ್ತಿಗೆ ಕೇಂದ್ರ ಕತ್ತರಿ: ಪ್ರಜಾಪ್ರಭುತ್ವದಲ್ಲಿ ವಿವಿಐಪಿ ಸಂಸ್ಕೃತಿಗೆ ಯಾವುದೇ ಜಾಗವಿಲ್ಲ- ಬಿಜೆಪಿ

ರಾಷ್ಟ್ರೀಯ ಜನತಾ ದಳ (ಆರ್'ಜೆಡಿ)ದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ನೀಡಲಾಗಿದ್ದ ವಿಶೇಷ ವಿಐಪಿ ಸವಲತ್ತಿಗೆ ಕೇಂದ್ರ ಸರ್ಕಾರ ಮೊಟಕುಗೊಳಿಸಿರುವ ನಿರ್ಧಾರವನ್ನು ಬಿಜೆಪಿ ಸರ್ಕಾರ ಸ್ವಾಗತಿಸಿದ್ದು, ಪ್ರಜಾಪ್ರಭುತ್ವದಲ್ಲಿ ವಿವಿಐಪಿ...

ಲಾಲೂ ವಿಐಪಿ ಸವಲತ್ತಿಗೆ ಕೇಂದ್ರ ಕತ್ತರಿ: ಪ್ರಜಾಪ್ರಭುತ್ವದಲ್ಲಿ ವಿವಿಐಪಿ ಸಂಸ್ಕೃತಿಗೆ ಯಾವುದೇ ಜಾಗವಿಲ್ಲ- ಬಿಜೆಪಿ
ರಾಷ್ಟ್ರೀಯ ಜನತಾ ದಳ (ಆರ್'ಜೆಡಿ)ದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್
Published On :
ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್'ಜೆಡಿ)ದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ನೀಡಲಾಗಿದ್ದ ವಿಶೇಷ ವಿಐಪಿ ಸವಲತ್ತಿಗೆ ಕೇಂದ್ರ ಸರ್ಕಾರ ಮೊಟಕುಗೊಳಿಸಿರುವ ನಿರ್ಧಾರವನ್ನು ಬಿಜೆಪಿ ಸರ್ಕಾರ ಸ್ವಾಗತಿಸಿದ್ದು, ಪ್ರಜಾಪ್ರಭುತ್ವದಲ್ಲಿ ವಿವಿಐಪಿ ಸಂಸ್ಕೃತಿಗೆ ಯಾವುದೇ ಜಾಗವಿಲ್ಲ ಎಂದು ಭಾನುವಾರ ಹೇಳಿದೆ. 
ಲಾಲೂ ಅವರ ವಿವಿಐಪಿ ಸವಲತ್ತನ್ನು ಮೊಟಕುಗೊಳಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ, ಬಿಜೆಪಿ ನಾಯಕ ಗೌರವ್ ಭಾಟಿಯಾ ಅವರು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಪ್ರತೀಯೊಬ್ಬ ವ್ಯಕ್ತಿ ಕೂಡ ಮುಖ್ಯವಾಗುತ್ತಾನೆ. ನಾಗರಿಕ ವಿಮಾನಯಾನ ಸಚಿವಾಲಯ ತೆಗೆದುಕೊಂಡಿರುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆಂದು ಹೇಳಿದ್ದಾರೆ. 
ಸಚಿವಾಲಯದ ಈ ನಿರ್ಧಾರ ಪ್ರತೀಯೊಬ್ಬರಿಗೂ ಕಠಿಣ ಸಂದೇಶವನ್ನು ರವಾನಿಸಲಿದೆ. ಪ್ರಜಾಪ್ರಭುತ್ವದಲ್ಲಿ ವಿವಿಐಪಿ ಸಂಸ್ಕೃತಿಗೆ ಯಾವುದೇ ಜಾಗವಿಲ್ಲ ಎಂಬ ಸಂದೇಶವನ್ನು ಸಾರುತ್ತದೆ. ಈ ತತ್ವನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ತಿಳಿಸಿದ್ದಾರೆ. 
ಇದರಂತೆ ಮತ್ತೊಬ್ಬರು ಬಿಜೆಪಿ ನಾಯಕ ಎಸ್. ಪ್ರಕಾಶ್ ಅವರೂ ಕೂಡ ಪ್ರತಿಕ್ರಿಯೆ ನೀಡಿದ್ದು, ಅಪರಾಧಿಯಾಗಿ ಜೈಲಿನಿಂದ ಜಾಮೀನಿನ ಮೇಲೆ ಹೊರಗೆ ಬಂದಿರುವ ವ್ಯಕ್ತಿ ವಿಶೇಷ ಸ್ಥಾನಮಾನಕ್ಕೆ ಯೋಗ್ಯನಲ್ಲ. ಲಾಲೂ ಪ್ರಸಾದ್ ಯಾದವ್ ಒಬ್ಬ ಅಪರಾಧಿ, ಜಾಮೀನಿನ ಮೇಲೆ ಹೊರಗೆ ಬಂದಿರುವ ವ್ಯಕ್ತಿಗೆ ವಿವಿಐಪಿ ಹಾಗೂ ವಿಶೇಷ ಸವಲತ್ತುಗಳನ್ನು ಹೇಗೆ ನೀಡಲು ಸಾಧ್ಯ? ಸಚಿವಾಲಯ ತೆಗೆದುಕೊಂಡಿರುವ ನಿರ್ಧಾರ ರಸಿಯಾಗಿದೆ ಎಂದಿದ್ದಾರೆ. 
ಮತ್ತೊಂದೆಡೆ ಕೇಂದ್ರ ಸರ್ಕಾರ ಈ ನಡೆಯನ್ನು ಜನತಾ ದಳ (ಸಂಯುಕ್ತ) ಖಂಡಿಸಿಸಿದೆ. ಮಾಜಿ ಮುಖ್ಯಮಂತ್ರಿಗಳಾಗಲೀ ಮತ್ತಾರೇ ಆದರೂ ಪ್ರತೀಯೊಬ್ಬರಿಗೂ ನಿಯಮಗಳು ಹಾಗೂ ನಿಬಂಧನೆಗಳು ಒಂದೇ ಆಗಿರುತ್ತವೆ. ಕೇವಲ ಲಾಲೂ ಪ್ರಸಾದ್ ಯಾದವ್ ಅವರಿಗೆ ಮಾತ್ರ ಈ ನಿಯಮವನ್ನು ವಿಧಿಸಿದರೆ, ಅದು ಸರಿಯಲ್ಲ ಎಂದು ಹೇಳಿಕೊಂಡಿದೆ. 
ಈ ಹಿಂದೆ ಪಾಟ್ನಾದಿಂದ ದೆಹಲಿ ಮತ್ತಿತರ ಕಡೆಗೆ ವಿಮಾಣ ಪ್ರಯಾಣ ಬೆಳೆಸುವಾಗ ಪಾಟ್ನಾದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆಯಿಲ್ಲದೆ ಲಾಲೂ ಮತ್ತು ಅವರ ಪತ್ನಿ ರಾಬ್ಡಿ ದೇವಿ ಪ್ರವೇಶಿಸಬಹುದಾಗಿತ್ತು. ಈ ಸೌಲಭ್ಯದಿಂದಾಗಿ ಈ ಇಬ್ಬರೂ ತಮ್ಮ ವಾಹನದಲ್ಲಿ ನೇರವಾಗಿ ರನ್ ವೇವರೆಗೆ ಸಾಗಿ ಅಲ್ಲಿಂದಲೇ ವಿಮಾನ ಹತ್ತಿಕೊಂಡು ಹೋಗಬಹುದಾಗಿತ್ತು. ವಿವಿಧ ಕಾಲಘಟ್ಟಗಳಲ್ಲಿ ಇಬ್ಬರೂ ಬಿಹಾರ ರಾಜ್ಯ ಮುಖ್ಯಮಂತ್ರಿಯಾಗಿದ್ದಾಗ ಈ ವಿಶೇಷ ಸವಲತ್ತನ್ನು ನೀಡಲಾಗಿತ್ತು. ಆ ಸವಲತ್ತು ಈವರೆಗೂ ಮುಂದುವರೆದಿತ್ತು. ಇದೀಗ ಇಬ್ಬರಿಗೂ ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲವಾದ್ದರಿಂದ ನೀಡಲಾಗಿದ್ಧ ವಿಶೇಷ ಸವಲತ್ತನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಿಂಪಡೆದುಕೊಂಡಿದೆ. 
ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಮೇಲೆ ಈಗಾಗಲೇ ಹಲವು ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿದ್ದು, ಲಾಲೂ ಮತ್ತು ಅವರ ಪತ್ನಿ, ಪುತ್ರಿ ವೀಸಾ ಭಾರತಿ ಅವರು ತನಿಖೆಗೆ ಒಳಪಟ್ಟಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಸೌಲಭ್ಯಗಳನ್ನು ಹಿಂಪಡೆದುಕೊಂಡಿರುವುದಿರಂದ ಲಾಲೂ ಅವರು ತೀವ್ರ ಮುಜುಗರಕ್ಕೊಳಗಾಗುವಂತಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.