ದೇಶ

ಮಾಜಿ ಪತ್ರಕರ್ತ ಅಶೋಕ್ ಮಲಿಕ್ ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ: ಕೇಂದ್ರ ಸಚಿವ ಸಂಪುಟ ಅನುಮೋದನೆ

ಹಿರಿಯ ವಿಶ್ಲೇಷಕ ಮತ್ತು ವೀಕ್ಷಕ ಸಂಶೋಧನಾ ಸಂಸ್ಥೆಯ ಸಹವರ್ತಿ ಅಶೋಕ್ ಮಲಿಕ್ ರಾಷ್ಟ್ರಪತಿಗಳ...

ಮಾಜಿ ಪತ್ರಕರ್ತ ಅಶೋಕ್ ಮಲಿಕ್ ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ: ಕೇಂದ್ರ ಸಚಿವ ಸಂಪುಟ ಅನುಮೋದನೆ
ಅಶೋಕ್ ಮಲಿಕ್
Published On :
ನವದೆಹಲಿ: ಹಿರಿಯ ವಿಶ್ಲೇಷಕ ಮತ್ತು ವೀಕ್ಷಕ ಸಂಶೋಧನಾ ಸಂಸ್ಥೆಯ ಸಹವರ್ತಿ ಅಶೋಕ್ ಮಲಿಕ್ ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಕೇಂದ್ರ ಸಂಪುಟ ಸಮಿತಿ ನಿನ್ನೆ ಅಶೋಕ್ ಮಲಿಕ್ ಅವರನ್ನು ಎರಡು ವರ್ಷಗಳ ಅವಧಿಗೆ ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಿಸಿ ಅನುಮೋದನೆ ನೀಡಿದೆ.
20 ವರ್ಷಗಳ ಕಾಲ ಪತ್ರಕರ್ತರಾಗಿ ದುಡಿದ ಅಶೋಕ್ ಮಲಿಕ್ ಹಲವು ಪ್ರಮುಖ ಭಾರತೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದರು. ಅದಕ್ಕೂ ಮುನ್ನ ಅವರು ಪಯೊನಿರ್ ಮತ್ತು ತೆಹಲ್ಕಾ ಪತ್ರಿಕೆಗಳ ಸಲಹಾ ಸಂಪಾದಕರಾಗಿದ್ದರು.
ಮಲಿಕ್ ಅವರು ವೀಕ್ಷಕ ಸಂಶೋಧನಾ ಸಂಸ್ಥೆಗೆ 2015ರಲ್ಲಿ ಸೇರಿದ್ದರು. ಪ್ರಸ್ತುತ ಅವರು ಆ ಸಂಸ್ಥೆಯ ನೆರೆಹೊರೆಯ ಪ್ರಾದೇಶಿಕ ಅಧ್ಯಯನಗಳ ಉಪಕ್ರಮದ ಮುಖ್ಯಸ್ಥರಾಗಿದ್ದಾರೆ. ಇದು ಭಾರತೀಯ ದೇಶೀಯ ರಾಜಕೀಯ ಮತ್ತು ವಿದೇಶಿ,ವ್ಯಾಪಾರ ನೀತಿಗಳ ಮೇಲೆ ಕೇಂದ್ರೀಕರಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.