ಲಾಲೂ ಪುತ್ರ ತೇಜ್ ಪ್ರತಾಪ್ ಪೆಟ್ರೋಲ್ ಬಂಕ್ ಪರವಾನಗಿ ರದ್ಧುಗೊಳಿಸಿದ ಭಾರತ್ ಪೆಟ್ರೋಲಿಯಂ
ರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಒಡೆತನದ ಪೆಟ್ರೋಲ್ ಬಂಕ್ ಪರವಾನಗಿಯನ್ನು ಭಾರತ್ ಪೆಟ್ರೋಲಿಯಂ...

Published On :
ಪಾಟ್ನಾ: ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಒಡೆತನದ ಪೆಟ್ರೋಲ್ ಬಂಕ್ ಪರವಾನಗಿಯನ್ನು ಭಾರತ್ ಪೆಟ್ರೋಲಿಯಂ ರದ್ದುಗೊಳಿಸಿದೆ.
ಪೆಟ್ರೋಲ್ ಪಂಪ್ ಪರವಾನಗಿ ರದ್ದು ಪಡಿಸುವುದನ್ನು ಪ್ರಶ್ನಿಸಿ 29 ವರ್ಷದ ತೇಜ್ ಪ್ರತಾಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪಾಟ್ನಾ ನ್ಯಾಯಾಲಯ ಭಾರತ್ ಪೆಟ್ರೋಲಿಯಂ ನಿಗಮದ ಮೇಲೆ ಹೇರಿದ್ದ ತಡೆಯಾಜ್ಞೆ ಆದೇಶ ತೆರವುಗೊಳಿಸಿದ ಮೇಲೆ ಪರವಾನಗಿ ರದ್ದು ಪಡಿಸಲಾಗಿದೆ.
ಪೆಟ್ರೋಲ್ ಬಂಕ್ ಪರವಾನಗಿ ಪಡೆಯಲು ತಪ್ಪು ಮಾಹಿತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ತೇಜ್ ಪ್ರತಾಪ್ ಅವರಿಗೆ ನೋಟಿಸ್ ನೀಡಲಾಗಿತ್ತು, ಪೆಟ್ರೋಲ್ ಬಂಕ್ ಪರವಾನಗಿ ಹೇಗೆ ಪಡೆದುಕೊಂಡಿರಿ ಎಂದು ವಿವರಣೇ ಕೇಳಿ ತೇಜ್ ಪ್ರತಾಪ್ ಗೆ ಭಾರತ್ ಪೆಟ್ರೋಲಿಯಂ ನಿಗಮ ನೋಟಿಸ್ ನೀಡಿತ್ತು. ತೇಜ್ ಪ್ರತಾಪ್ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು. ಪೆಟ್ರೋಲ್ ಪಂಪ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರ್ ಆರ್ ಜೆಡಿ ಸಮರ್ಥನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪರವಾನಗಿರದ್ದುlicencepetrol pumpTej Pratap Yadavತೇಜ್ ಪ್ರತಾಪ್ ಯಾದವ್ಪೆಟ್ರೋಲ್ ಪಂಪ್Bharat Petroleumterminatedಭಾರತ್ ಪೆಟ್ರೋಲಿಯಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


