ದೇಶ

ಪಿಒಕೆ ಭಾರತದ ಅವಿಭಾಜ್ಯ ಅಂಗ: ಸರ್ತಾಜ್ ಅಜೀಜ್ ನಿಂದ ಪತ್ರವಿಲ್ಲದೇ ಪಿಒಕೆ ವಿದ್ಯಾರ್ಥಿಗೆ ವೀಸಾ-ಸುಷ್ಮಾ

ಪೋಷಕರ ಮನವಿಗೆ ಸ್ಪಂದಿಸಿರುವ ಸುಷ್ಮಾ ಸ್ವರಾಜ್ ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದ್ದು, ಯಾವುದೇ ಪತ್ರದ ಅವಶ್ಯಕತೆ ಇಲ್ಲ, ಪತ್ರ ಇಲ್ಲದೆಯೇ ಪಾಕ್ ಆಕ್ರಮಿತ ಕಾಶ್ಮೀರ ವಿದ್ಯಾರ್ಥಿಗೆ ವೈದ್ಯಕೀಯ ಸೌಲಭ್ಯ

ಪಿಒಕೆ ಭಾರತದ ಅವಿಭಾಜ್ಯ ಅಂಗ: ಸರ್ತಾಜ್ ಅಜೀಜ್ ನಿಂದ ಪತ್ರವಿಲ್ಲದೇ ಪಿಒಕೆ ವಿದ್ಯಾರ್ಥಿಗೆ ವೀಸಾ-ಸುಷ್ಮಾ
ಸುಷ್ಮಾ ಸ್ವರಾಜ್
Published On :
ನವದೆಹಲಿ: ಲಿವರ್ ನಲ್ಲಿ ಟ್ಯೂಮರ್ ಸಮಸ್ಯೆ ಎದುರಾಗಿರುವ ಪಾಕ್ ಆಕ್ರಮಿತ ಕಾಶ್ಮೀರ ವಿದ್ಯಾರ್ಥಿಗೆ ವೈದ್ಯಕೀಯ ವೀಸಾ ಪಡೆಯಲು ಪಾಕಿಸ್ತಾನವೇ ಅಡ್ಡಿಯಾಗಿ ಪರಿಣಮಿಸಿದೆ. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಭಾರತೀಯ ಹೈಕಮಿಷನ್ ಗೆ ಪತ್ರ ಬರೆಯಲು ನಿರಾಕರಿಸುತ್ತಿರುವುದೇ ಇದಕ್ಕೆ ಕಾರಣ. 
ಸರ್ತಾಜ್ ಅಜೀಜ್ ಭಾರತೀಯ ಹೈಕಮಿಷನ್ ಗೆ ಪತ್ರ ಬರೆಯಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ರಾವಲಕೋಟ್ ನ ನಿವಾಸಿಯಾಗಿರುವ ಒಸಾಮ ಅಲಿ ಅವರ ಕುಟುಂಬ ಭಾರತೀಯ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಮೊರೆ ಹೋಗಿದ್ದು, ಪಾಕಿಸ್ತಾನದ ಸಲಹೆಗಾರರಿಂದ ವೈದ್ಯಕೀಯ ವೀಸಾ ಶಿಫಾರಸ್ಸು ಪತ್ರಕ್ಕೆ ವಿನಾಯಿತಿ ನೀಡುವಂತೆ ಒಸಾಮ ಅಲಿ ಕುಟುಂಬ ಸದಸ್ಯರು ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.