ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಫ್ಟರ್ ಹಗರಣ: ಮತ್ತೊರ್ವ ಆರೋಪಿ ಬಂಧನ
ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಫ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮ್ಯಾಟ್ರಿಕ್ಸ್ ಹೊಲ್ಡಿಂಗ್ಸ್...

Published On :
ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಫ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮ್ಯಾಟ್ರಿಕ್ಸ್ ಹೊಲ್ಡಿಂಗ್ಸ್ ದುಬೈ ಸಂಸ್ಥೆಯ ನಿರ್ದೇಶಕಿ ಶಿವಾನಿ ಸಕ್ಸೆನಾ ಎಂಬುವರನ್ನು ಬಂಧಿಸಿದೆ.
ಬಂಧಿತಾ ಶಿವಾನಿ ಸಕ್ಸೆನಾ ರಾಜೀವ್ ಬಹದ್ದೂರ್ ಸಕ್ಸೆನಾ ಅವರ ಪತ್ನಿ. ರಾಜೀವ್ ಅವರು ದುಬೈನ ಜುಮೇರಿಯಾದ ಪಲ್ಮಾದಲ್ಲಿ ನೆಲೆಸಿದ್ದಾರೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಇಂಟರ್ ನ್ಯಾಷನಲ್ ಲಿಮಿಟೆಡ್ ಯುಕೆ, 58 ಮಿಲಿಯನ್ ಯುರೋವನ್ನು ಕಿಕ್ ಬ್ಯಾಕ್ ಆಗಿ ಗಾರ್ಡಿಯನ್ ಸರ್ವಿಸ್ ಮತ್ತು ತುನಿಶಿಯಾ ಮತ್ತು ಐಡಿಎಸ್ ಗೆ ನೀಡಿದೆ ಎಂಬ ಹಲವು ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಕಲೆ ಹಾಕಿದೆ.
ಕಿಕ್ ಬ್ಯಾಕ್ ಪಡೆದ ಸಂಸ್ಥೆಗಳು ನಂತರ ಈ ಹಣವನ್ನು ಯುಎಚ್ವೈ ಸೆಕ್ಸೆನಾ ಕಂಪನಿಗೆ ವರ್ಗಾವಣೆ ಮಾಡಿರುವ ದಾಖಲೆಗಳನ್ನು ತನಿಖಾ ತಂಡ ಕಲೆ ಹಾಕಿರುವ ಹಿನ್ನೆಲೆಯಲ್ಲಿ ಯುಎಚ್ವೈ ಸೆಕ್ಸೆನಾ ಕಂಪನಿಯ ನಿರ್ದೇಶಕಿಯಾಗಿರುವ ಶಿವಾನಿ ಸಕ್ಸೆನಾ ಅವರು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ 3,600 ಕೋಟಿ ರು.ಮೌಲ್ಯದ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣ ನಡೆದಿದ್ದು ಈ ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


