ಪ್ರಧಾನಿ ಮೋದಿ ಕುರಿತ ಹಾಸ್ಯದ ಫೋಟೋ ಹಾಕಿದ ಕಾಮಿಡಿ ಗ್ರೂಪ್ 'ಎಐಬಿ' ವಿರುದ್ಧ ಎಫ್ಐಆರ್
ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಹಾಸ್ಯದ ಫೋಟೋವೊಂದನ್ನು ಹಾಕಿದ ಕಾಮಿಡಿ ಗ್ರೂಪ್ 'ಎಐಬಿ' ಸಾರ್ವಜನಿಕರ ಟೀಕೆಗಳಿಗೆ ಗುರಿಯಾಗಿದೆ...

Published On :
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಹಾಸ್ಯದ ಫೋಟೋವೊಂದನ್ನು ಹಾಕಿದ ಕಾಮಿಡಿ ಗ್ರೂಪ್ 'ಎಐಬಿ' ಸಾರ್ವಜನಿಕರ ಟೀಕೆಗಳಿಗೆ ಗುರಿಯಾಗಿದೆ.
ಸ್ನಾಪ್ ಚಾಟ್ ನಲ್ಲಿ ಮೋದಿಯವರ ಮುಖವನ್ನು ನಾಯಿ ಚಿತ್ರದಂತೆ ತಿರುಚಿರುವ ಫೋಟೋದ ಜೊತೆಗೆ, ಪ್ರಧಾನಿಯಂತಯೇ ಕಾಣುವ ವ್ಯಕ್ತಿಯೊಬ್ಬರು ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತ ನಿಂತಿರುವ ಚಿತ್ರವನ್ನು ಎಐಬಿ ಪೋಸ್ಟ್ ಮಾಡಿತ್ತು.
ಎಐಬಿ ಈ ಪೋಸ್ಟ್ ಹಾಕುತ್ತಿದ್ದಂತೆಯೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದರು, ಅಲ್ಲದೆ, ಎಐಬಿ ವಿರುದ್ಧ ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದರು.
ಇದರಿಂದ ತೀವ್ರ ಮುಜುಗರಕ್ಕೊಳಗಾದ ಎಐಬಿ, ಪ್ರಧಾನಿ ಮೋದಿಯವರ ಕುರಿತಾದ ಪೋಸ್ಟ್ ಅನ್ನೇ ತೆಗೆದು ಹಾಕಿದೆ.
ಹಾಸ್ಯ ಫೋಟೋ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮುಂಬೈ ಪೊಲೀಸರು, ಮೋದಿಯವರನ್ನು ಹಾಸ್ಯವಾಗಿ ಬಿಂಬಿಸಿದ ಎಐಬಿ ಪೋಸ್ಟ್'ನ್ನು ಗಮನಿಸಲಾಗಿದ್ದು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆಗಾಗಿ ಪೋಸ್ಟ್'ನ್ನು ಸೈಬರ್ ವಿಭಾಗಕ್ಕೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


