ದೇಶ

ಪಾಕ್ ಕದನ ವಿರಾಮ ಉಲ್ಲಂಘನೆಗೆ ಪ್ರಬಲ ಪ್ರತೀಕಾರದಿಂದಲೇ ಪಾಠ ಕಲಿಸಬೇಕು: ರಕ್ಷಣಾ ತಜ್ಞರು

ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕಾದರೆ ಪ್ರಬಲ ಪ್ರತೀಕಾರವೊಂದೇ ದಾರಿ ಎಂದು ರಕ್ಷಣಾ ತಜ್ಞರು ಗುರುವಾರ ಹೇಳಿದ್ದಾರೆ...

ಪಾಕ್ ಕದನ ವಿರಾಮ ಉಲ್ಲಂಘನೆಗೆ ಪ್ರಬಲ ಪ್ರತೀಕಾರದಿಂದಲೇ ಪಾಠ ಕಲಿಸಬೇಕು: ರಕ್ಷಣಾ ತಜ್ಞರು
ಸಂಗ್ರಹ ಚಿತ್ರ
Published On :
ನವದೆಹಲಿ: ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕಾದರೆ ಪ್ರಬಲ ಪ್ರತೀಕಾರವೊಂದೇ ದಾರಿ ಎಂದು ರಕ್ಷಣಾ ತಜ್ಞರು ಗುರುವಾರ ಹೇಳಿದ್ದಾರೆ. 
ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರದ ಕೆರನ್ ಸೆಕ್ಟರ್ ಬಳಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಇಬ್ಬರು ಭಾರತೀಯ ಯೋಧರನ್ನು ಬಲಿಪಡೆದುಕೊಂಡಿದ್ದರು. ಪಾಕಿಸ್ತಾನದ ಈ ದುರ್ವರ್ತನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞೆ ಶಿವಾಲೀ ದೇಶಪಾಂಡೆಯವರು, ಇಂತಹ ವರ್ತನೆಗಳನ್ನು ಭಾರತ ಸಹಿಸುವುದಿಲ್ಲ. ಭಾರತ ಸುಮ್ಮನೆ ಕೂರುವುದಿಲ್ಲ ಎಂಬುದನ್ನು ಪಾಕಿಸ್ತಾನ ಮನವರಿಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 
ಶೀಘ್ರದಲ್ಲಿಯೇ ವಿಶ್ವ ಭೂಪಟದಲ್ಲಿ ಪಾಕಿಸ್ತಾನ ಮರೆಯಾಗಲಿದೆ. ಪಾಕಿಸ್ತಾನಕ್ಕೆ ಶೀಘ್ರದಲ್ಲಿಯೇ ಭಾರತ ದಿಟ್ಟ ಉತ್ತರವನ್ನು ನೀಡಲಿದೆ. ಕೆರನ್ ಸೆಕ್ಟರ್ ಬಳಿ ಪಾಕಿಸ್ತಾನದ ಸೇನೆ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಇಬ್ಬರು ಭಾರತೀಯ ಯೋಧರು ಬಲಿಯಾಗಿದ್ದಾರೆ. ಇದು ನಿಜಕ್ಕೂ ದುರಾದೃಷ್ಟಕರ. ಹುತಾತ್ಮ ಯೋಧರಿಗೆ ಸೆಲ್ಯೂಟ್ ಹೊಡೆಯುತ್ತಿದ್ದೇನೆ. ಇಂತರ ವರ್ತನೆಗಳಿಗೆ ನಾವು ದಿಟ್ಟ ಉತ್ತರವನ್ನು ನೀಡಬೇಕಿದೆ. ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಬೇಕು. ಯಾವಾಗ ಹೇಗೆ ಉತ್ತರವನ್ನು ನೀಡಬೇಕೆಂಬುದನ್ನು ಸೇನೆಯೇ ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.