ಪ್ರಧಾನಿ ಮೋದಿ ವಿಷಯವಾಗಿ ವಾಗ್ವಾದ: ಕೊನೆಗೆ ವಧು-ವರರಿಂದ ಮದುವೆಯೇ ರದ್ದು!
ಭವಿಷ್ಯದಲ್ಲಿ ಸತಿ-ಪತಿಗಳಾಗಬೇಕಿದ್ದ ವಧು-ವರ ಪ್ರಧಾನಿ ನರೇಂದ್ರ ಮೋದಿ ವಿಷಯವಾಗಿ ಪರ ವಿರೋಧ ಮಾತನಾಡಿ ಜಗಳವಾಡಿದ್ದು ಅವರಿಬ್ಬರ ಜಗಳ ಕೊನೆಗೆ ಅವರ...

Published On :
ಲಖನೌ: ಭವಿಷ್ಯದಲ್ಲಿ ಸತಿ-ಪತಿಗಳಾಗಬೇಕಿದ್ದ ವಧು-ವರ ಪ್ರಧಾನಿ ನರೇಂದ್ರ ಮೋದಿ ವಿಷಯವಾಗಿ ಪರ ವಿರೋಧ ಮಾತನಾಡಿ ಜಗಳವಾಡಿದ್ದು ಅವರಿಬ್ಬರ ಜಗಳ ಕೊನೆಗೆ ಅವರ ಮದುವೆಯೇ ರದ್ದಾಗುವಂತೆ ಮಾಡಿದೆ.
ಉತ್ತರಪ್ರದೇಶ ಕಾನ್ಪುರದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಯುವಕನಿಗೆ ಸರ್ಕಾರಿ ಉದ್ಯೋಗದಲ್ಲಿದ್ದ ಓರ್ವ ಯುವತಿಗೂ ಮದುವೆ ನಿಶ್ಚಯವಾಗಿತ್ತು. ಮದುವೆಯ ವಿಷಯವಾಗಿ ಚರ್ಚಿಸಲು ಇಬ್ಬರು ದೇವಾಲಯದ ಬಳಿ ಭೇಟಿಯಾಗಿದ್ದಾರೆ. ಅಲ್ಲಿ ಮದುವೆಗೆ ಆಗುವ ಖರ್ಚು ಮತ್ತಿತ್ತರ ವಿಷಯ ಮಾತನಾಡುತ್ತಾ ಕೊನೆಗೆ ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆಯು ಮಾತನಾಡಿದ್ದಾರೆ. ಇದು ಸಾಲದೆ ಪ್ರಧಾನಿ ಮೋದಿ ವಿಷಯವಾಗಿ ಚರ್ಚೆ ಮಾಡಿದ್ದಾರೆ.
ದೇಶದ ಆರ್ಥಿಕ ಸ್ಥಿತಿ ಹದಗೆಡಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಯುವಕ ವಾದಿಸಿದ್ದಾನೆ. ಇದಕ್ಕೆ ಯುವತಿ ಮೋದಿ ಅವರನ್ನು ಬಿಟ್ಟುಕೊಡದೇ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವತ್ತಾ ಸಾಗಿದೆ ಎಂದು ಹೇಳಿದ್ದಾಳೆ. ಇದು ಹೀಗೆ ಮುಂದುವರೆದಿದ್ದು ಇಬ್ಬರು ನಡುವೆ ವಾಗ್ವಾದ ತಾರಕಕ್ಕೇರಿದ್ದು ಇಬ್ಬರು ಒಬ್ಬರನ್ನೊಬ್ಬರು ದೂಷಿಸಿಕೊಂಡಿದ್ದಾರೆ.
ಇದೇ ವಿಚಾರವಾಗಿ ಮನೆಯಲ್ಲಿ ವಿಷಯ ತಿಳಿಸಿ ತಾವು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಪೋಷಕರು ಎಷ್ಟೇ ಮನವೊಲಿಸಿದರು ಅದು ಸಾಧ್ಯವಾಗದೇ ಕೊನೆಗೆ ಮದುವೆಯನ್ನೇ ರದ್ದು ಮಾಡಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


