ದೇಶ

ಚೀನಾ 'ಸುರಕ್ಷತಾ ಸಲಹೆ'ಯನ್ನು ರಾಜತಾಂತ್ರಿಕ ಹಂತದ ಮೂಲಕವೇ ನೋಡಿಕೊಳ್ಳುತ್ತೇವೆ: ಬಿಜೆಪಿ

ತನ್ನ ನಾಗರಿಕರಿಗೆ ಚೀನಾ ನೀಡಿರುವ ಸಲಹೆ ಕುರಿತು ರಾಜತಾಂತ್ರಿಕ ಹಂತದ ಮೂಲಕವೇ ಭಾರತ ಸರ್ಕಾರ ನೋಡಿಕೊಳ್ಳಲಿದೆ ಎಂದು ಬಿಜೆಪಿ ಭಾನುವಾರ ಹೇಳಿದೆ...

ಚೀನಾ 'ಸುರಕ್ಷತಾ ಸಲಹೆ'ಯನ್ನು ರಾಜತಾಂತ್ರಿಕ ಹಂತದ ಮೂಲಕವೇ ನೋಡಿಕೊಳ್ಳುತ್ತೇವೆ: ಬಿಜೆಪಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್
Published On :
ನವದೆಹಲಿ: ತನ್ನ ನಾಗರಿಕರಿಗೆ ಚೀನಾ ನೀಡಿರುವ ಸಲಹೆ ಕುರಿತು ರಾಜತಾಂತ್ರಿಕ ಹಂತದ ಮೂಲಕವೇ ಭಾರತ ಸರ್ಕಾರ ನೋಡಿಕೊಳ್ಳಲಿದೆ ಎಂದು ಬಿಜೆಪಿ ಭಾನುವಾರ ಹೇಳಿದೆ. 
ಸಿಕ್ಕಿಂನ ಡೋಕ್ಲಾಮ್ ಪ್ರದೇಶದ ಮೇಲಿನ ಹಿಡಿತದ ವಿಚಾರಕ್ಕೆ ಸಂಬಂಧಿಸಿದಂತೆ ಇಂಡೋ-ಚೀನಾ ತಿಕ್ಕಾಟ ಮುಂದುವರೆದಿರುವಂತೆಯೇ ನಿನ್ನೆಯಷ್ಟೇ ಚೀನಾ ಸರ್ಕಾರ ತನ್ನ ದೇಶದ ಪ್ರಜೆಗಳು ಭಾರತ ಪ್ರವಾಸವನ್ನು ಮುಂದೂಡುವಂತೆ ಸಲಹೆ ನೀಡಿತ್ತು.  ಪ್ರಸ್ತುತ ಭಾರತದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಗಡಿ ಉದ್ವಿಗ್ನವಾಗಿರುವುದರಿಂದ ಚೀನಾ ಪ್ರಜೆಗಳು ಭಾರತ ಪ್ರವಾಸವನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಬೇಕು ಮತ್ತು ಭಾರತದಲ್ಲಿ ತಮ್ಮ ಸಂಬಂಧಿಕರ ಸುರಕ್ಷತೆ  ಕುರಿತಂತೆ ಜಾಗೃತಿ ವಹಿಸಬೇಕು ಎಂದು ಹೇಳಿತ್ತು. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, ಇಂತಹ ವಿಚಾರಗಳನ್ನು ನಮ್ಮ ಸರ್ಕಾರ ರಾಜತಾಂತ್ರಿಕ ಹಂತದಲ್ಲೇ ನೋಡಿಕೊಳ್ಳಲಿದೆ. ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ. ಗಡಿ ವಿವಾದ ಸಂಬಂಧ ಭಾರತದ ಉನ್ನತಾಧಿಕಾರಿಗಳು ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.