ಮುಂಬೈ: ಒಂದೇ ಹಳಿ ಮೇಲೆ ಮುಖಾಮುಖಿಯಾದ ಮೋನೋ ರೈಲುಗಳು- ತಪ್ಪಿದ ದುರಂತ
ಒಂದೇ ಹಳಿ ಮೇಲೆ ಎರಡು ಮೋನೋ ರೈಲುಗಳು ಮುಖಾಮುಖಿಯಾಗಿದ್ದು, ಸಂಭವಿಸಬೇಕಿದ್ದ ಭಾರೀ ದರುಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದಿದೆ...

Published On :
ಮುಂಬೈ: ಒಂದೇ ಹಳಿ ಮೇಲೆ ಎರಡು ಮೋನೋ ರೈಲುಗಳು ಮುಖಾಮುಖಿಯಾಗಿದ್ದು, ಸಂಭವಿಸಬೇಕಿದ್ದ ಭಾರೀ ದರುಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದಿದೆ.
ನಿನ್ನೆ ಸಂಜೆ ಚೆಂಬುರ್ ಬಳಿ ಸಂಭವಿಸಿದೆ. ಎರಡು ರೈಲುಗಳು ಒಂದೇ ಹಳಿ ಮೇಲೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬಂದಿವೆ. ಈ ವೇಳೆ ಎರಡು ರೈಲುಗಳ ಪೈಕೆ ಒಂದು ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿ ಹಳಿ ಮೇಲೆಯೇ ಹಠಾತ್ ತನ್ನ ಕಾರ್ಯವನ್ನು ನಿಲ್ಲಿಸಿದೆ. ಪರಿಣಾಮ ಸ್ಥಳದಲ್ಲಿ ಸಂಭವಿಸಬೇಕಾಗಿದ್ದ ದುರಂತವೊಂದು ತಪ್ಪಿದೆ. ಎರಡೂ ರೈಲಿನಲ್ಲಿಯೂ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರು. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.
ಘಟನೆ ಕುರಿತು ಮಾಹಿತಿ ತಿಳಿದ ಪ್ರಯಾಣಿಕರ ರಕ್ಷಣೆಗೆ ಅಧಿಕಾರಿಗಳು ಬಂದಿದ್ದಾರೆ, ಕಾರ್ಯಾಚಱಣೆ ನಡೆಸಿ ವಾಡಾಲ ಡಿಪೋದಿಂದ ಮತ್ತೊಂದು ರೈಲನ್ನು ಸ್ಥಳಕ್ಕೆ ರವಾನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


