ನಾನು ಗಲ್ಲಿಗೆ ಏರಲು ಸಿದ್ಧ, ಆದರೆ ಬಿಜೆಪಿಯನ್ನು ಮಾತ್ರ ಕಿತ್ತೊಗೆಯದೆ ಬಿಡುವುದಿಲ್ಲ: ಲಾಲೂ ಪ್ರಸಾದ್ ಯಾದವ್
ತಮ್ಮ ಹಾಗೂ ತಮ್ಮ ಪತ್ನಿ, ಪುತ್ರನ ಮೇಲೆ ಎಫ್ಐಆರ್ ದಾಖಲಿಸಿದ ನಂತರ ಸಿಬಿಐ ಮತ್ತು ಜಾರಿ...

Published On :
ಪಾಟ್ನಾ: ತಮ್ಮ ಹಾಗೂ ತಮ್ಮ ಪತ್ನಿ, ಪುತ್ರನ ಮೇಲೆ ಎಫ್ಐಆರ್ ದಾಖಲಿಸಿದ ನಂತರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತಮ್ಮ ಮತ್ತು ತಮ್ಮ ಪುತ್ರಿಯಾದ ಮಿಸಾ ಭಾರ್ತಿ ನಿವಾಸದ ಮೇಲೆ ನಡೆಸಿದ ದಾಳಿಯನ್ನು ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕೇಂದ್ರ ಸರ್ಕಾರದ ಆಡಳಿತ ಯಂತ್ರದ ದುರುಪಯೋಗ ಎಂದು ಬಣ್ಣಿಸಿದ್ದಾರೆ. ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ಕಾರಣ ಎಂದು ಕೂಡ ಅವರು ಆರೋಪಿಸಿದ್ದಾರೆ. ಈ ದಾಳಿಯು ತಮ್ಮನ್ನು ಕೆಡಿಸಲು ಮತ್ತು ಬಿಹಾರದಲ್ಲಿನ ಭಾರೀ ಮೈತ್ರಿಯನ್ನು ಮುರಿಯಲು ನಡೆಸುತ್ತಿರುವ ಕೆಟ್ಟ ನಡೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
'' ನಾನು ನೇಣು ಹಾಕಿಕೊಳ್ಳಲು ಸಿದ್ಧನಿದ್ದೇನೆ ಅಮಿತ್ ಶಾ ಮತ್ತು ಮೋದಿಯವರೇ, ಆದರೆ ನಿಮ್ಮನ್ನು ಬುಡಸಮೇತ ಕಿತ್ತೊಗೆಯದೆ ಬಿಡುವುದಿಲ್ಲ. ನಿಮ್ಮ ಅಹಂಕಾರ ನಿಮಗೆ ಮುಳುವಾಗಲಿದೆ ಎಂದು ಪಾಟ್ನಾದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಅವರು ನಿನ್ನೆ ರಾಂಚಿಯಲ್ಲಿ ಮೇವು ಹಗರಣ ಕೇಸಿಗೆ ಸಂಬಂಧಪಟ್ಟಂತೆ ಸಿಬಿಐ ವಿಶೇಷ ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾಗಿದ್ದರು.
''ನರೇಂದ್ರ ಮೋದಿ ಮತ್ತು ಅಮಿತ್ ಶಾ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದು ಇದರಲ್ಲಿ ಸಿಬಿಐಯದ್ದು ತಪ್ಪೇನಿಲ್ಲ. ಸಿಬಿಐ ದಾಳಿ ವೇಳೆ ಅನೇಕ ಅಧಿಕಾರಿಗಳು ನನ್ನ ಬಳಿ ತಮಗೆ ಕೇಂದ್ರ ಸರ್ಕಾರದ ಒತ್ತಡವಿದೆ ಎಂದು ಹೇಳಿಕೊಂಡಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ನಡೆ. ಕೇಂದ್ರ ಸರ್ಕಾರ ನನ್ನ ಮತ್ತು ನನ್ನ ಕುಟುಂಬವನ್ನು ಗುರಿಯಾಗಿಟ್ಟುಕೊಂಡಿದೆ. ಯಾಕೆಂದರೆ ನರೇಂದ್ರ ಮೋದಿ ಸರ್ಕಾರ ಮತ್ತು ಬಿಜೆಪಿಯನ್ನು ದೇಶದಿಂದ ಕಿತ್ತೊಗೆಯಲು ನಾನು ದೃಢ ಸಂಕಲ್ಪ ಮಾಡಿದ್ದೇನೆ'' ಎಂದು ಆಕ್ರೋಶದಿಂದ ಹೇಳಿದರು.
ಆಧಾರರಹಿತ ಕಾರಣಗಳಿಗಾಗಿ ಈ ಕೇಸಿನಲ್ಲಿ ತಮ್ಮ ಪುತ್ರ ತೇಜಸ್ವಿ ಮತ್ತು ಪತ್ನಿ ರಾಬ್ರಿಯನ್ನು ಎಳೆದು ತಂದದ್ದಕ್ಕಾಗಿ ಕೂಡ ಲಾಲೂ ಪ್ರಸಾದ್ ಯಾದವ್ ಆಕ್ರೋಶ ವ್ಯಕ್ತಪಡಿಸಿದರು. ಹೊಟೇಲ್ ನ ಗುತ್ತಿಗೆ ನೀಡಿದ ಸಂದರ್ಭದಲ್ಲಿ ತೇಜಸ್ವಿ ಅಪ್ರಾಪ್ತನಾಗಿದ್ದ. ರಾಬ್ರಿ ಕೂಡ ಸಾರ್ವಜನಿಕವಾಗಿ ಪರಿಚಯದ ವ್ಯಕ್ತಿಯಾಗಿರಲಿಲ್ಲ. ತಮ್ಮ ನಿವಾಸದ ಮೇಲೆ ಸಿಬಿಐ ನಡೆಸಿದ ದಾಳಿಗೆ ಸಂಬಂಧಪಟ್ಟಂತೆ ಸಿಬಿಐಯಿಂದ ದಾಸ್ತಾನು ಪಟ್ಟಿಯನ್ನು ಕೇಳಿದ್ದೇನೆ. ದಾಳಿಗೂ ಮುನ್ನ ಸಿಬಿಐ ಅಧಿಕಾರಿಗಳ ಜೊತೆ ಮಾತನಾಡಿದ್ದು ಇದೊಂದು ಶೋಧ ಕಾರ್ಯಾಚರಣೆಯಷ್ಟೆ ಎಂದು ಹೇಳಿದರು. ಅದರಂತೆ ನಾನು ನನ್ನ ಕುಟುಂಬದವರಿಗೆ ತನಿಖೆಗೆ ಅಧಿಕಾರಿಗಳ ಕಾರ್ಯಾಚರಣೆಗೆ ಸಹಕರಿಸುವಂತೆ ಹೇಳಿದ್ದೇನೆ ಎಂದರು.
ಇಂದು ಬೆಳಗ್ಗೆ ರಾಂಚಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಅಧಿಕಾರಾವಧಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಅಧಿಕ ಲಾಭವುಂಟಾಯಿತು. ಆದರೆ ನಾನು ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳಿದರು.
ಐಆರ್ ಸಿಟಿಸಿಗೆ ಹೊಟೇಲ್ ಗಳ ಗುತ್ತಿಗೆ ನೀಡಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸಿಬಿಐ 12 ಕಡೆಗಳಲ್ಲಿ ದಾಳಿ ನಡೆಸಿ ಶೋಧ ಮಾಡಿದೆ.
ಟಾಟಾ ಕಂಪೆನಿ ಮೂಲದ ಹೊಟೇಲ್ ಗಳಿಗೆ ರಾಂಚಿ ಮತ್ತು ಪುರಿ ಹೊಟೇಲ್ ಗಳಲ್ಲಿ ಜವಬ್ದಾರಿ ನೀಡಲಾಗಿದೆ. ಇದೇ ಯೋಜನೆಯಡಿ ದೆಹಲಿ ಮೂಲದ ಹೊಟೇಲ್ 1 ಕೋಟಿ ರೂಪಾಯಿಯನ್ನು ಅನುಮತಿ ಶುಲ್ಕವಾಗಿ ರೈಲ್ವೆ ಇಲಾಖೆಗೆ ನೀಡಿದೆ ಎಂದು ಲಾಲೂ ಪ್ರಸಾದ್ ಯಾದವ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿbjpಬಿಜೆಪಿಲಾಲೂ ಪ್ರಸಾದ್ ಯಾದವ್Lalu Prasad YadavCBIAmit Shahಸಿಬಿಐದಾಳಿಅಮಿತ್ ಶಾraid
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


