ದೇಶ

ಮಗನ ಸಾವಿನ ವಾರ್ಷಿಕೋತ್ಸವದಲ್ಲಿ ರಕ್ತಪಾತ ಬೇಡ: ಬುರ್ಹಾನ್ ವನಿ ತಂದೆ

ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಹತ್ಯೆಯಾಗಿ ಒಂದು ವರ್ಷ ಕಳೆದಿದ್ದು, ಹತ್ಯೆಯ ವಾರ್ಷಿಕೋತ್ಸವದ ವೇಳೆ ಯಾವುದೇ ರೀತಿಯ ರಕ್ತಪಾತ ...

ಮಗನ ಸಾವಿನ ವಾರ್ಷಿಕೋತ್ಸವದಲ್ಲಿ ರಕ್ತಪಾತ ಬೇಡ: ಬುರ್ಹಾನ್ ವನಿ ತಂದೆ
ಬುರ್ಹಾನ್ ವನಿ
Published On :
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಹತ್ಯೆಯಾಗಿ ಒಂದು ವರ್ಷ ಕಳೆದಿದ್ದು, ಹತ್ಯೆಯ ವಾರ್ಷಿಕೋತ್ಸವದ ವೇಳೆ ಯಾವುದೇ ರೀತಿಯ ರಕ್ತಪಾತ ಆಗುವುದು ಬೇಡ ಶಾಂತಿ ಕಾಪಾಡಿ ಎಂದು ಆತನ ತಂದೆ ಮನವಿ ಮಾಡಿದ್ದಾರೆ.
ಯಾವುದೇ ರೀತಿಯ ಕೊಲೆ ಅಥವಾ ರಕ್ತಪಾತವನ್ನು ನಾನು ಬಯಸುವುದಿಲ್ಲ, ಶಾಂತಿ ಮತ್ತು ಸಾಮರಸ್ಯವನ್ನು ನಾನು ಬಯಸುತ್ತೇನೆ ಎಂದು ಮುಜಾಫರ್ ಅಹ್ಮದ್ ವನಿ ವಿಡಿಯೋ ಮಸೇಜ್ ಕಳುಹಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ಗೀನ್ ಕಮಾಂಡರ್ ಬುರ್ಹಾನ್ ವನಿ  ಸಾವಿನ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ  ಜಾರಿಗೊಳಿಸಲಾಗಿದೆ.ಬುರ್ಹಾನ್ ವನಿಯ ಮೂಲಕ ಸ್ಥಳ, ಪುಲ್ವಾಮ ಜಿಲ್ಲೆ, ಅನಂತನಾಗ್, ಸೋನಿಪತ್, ಕುಲ್ಗಮ್, ಬಾರಾಮುಲ್ಲಾ, ಸೋಪೋರ್, ಮತ್ತು ಇತರೆ ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ಮೇಲೆ ನಿಗಾ ವಹಿಸಿದ್ದು ಭದ್ರತೆ ಹೆಚ್ಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.