ದೇಶ

ಹೋಟೆಲ್ ಗುತ್ತಿಗೆಯಲ್ಲಿ ಅಕ್ರಮ: ಲಾಲೂ ಕುಟುಂಬದ ಮೇಲೆ ಸಿಬಿಐ ದಾಳಿ, ಪ್ರಕರಣ ದಾಖಲು

ಮಾಜಿ ಕೇಂದ್ರ ರೈಲ್ವೇ ಸಚಿವ ಹಾಗೂ ಆರ್'ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ದೊಡ್ಡ ಶಾಕ್ ನೀಡಿದ್ದು,...

ಹೋಟೆಲ್ ಗುತ್ತಿಗೆಯಲ್ಲಿ ಅಕ್ರಮ: ಲಾಲೂ ಕುಟುಂಬದ ಮೇಲೆ ಸಿಬಿಐ ದಾಳಿ, ಪ್ರಕರಣ ದಾಖಲು
ಮಾಜಿ ಕೇಂದ್ರ ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್
Published On :
ನವದೆಹಲಿ: ಮಾಜಿ ಕೇಂದ್ರ ರೈಲ್ವೇ ಸಚಿವ ಹಾಗೂ ಆರ್'ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ದೊಡ್ಡ ಶಾಕ್ ನೀಡಿದ್ದು, ಹೋಟೆಲ್'ಗಳ ಗುತ್ತಿಗೆಯಲ್ಲಿ ಅಕ್ರಮ ನಡೆಸಿದ್ದಾರೆಂಬ ಆರೋಪದ ಮೇರೆಗೆ ಲಾಲೂ ಮನೆ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಇಂಚಿಂಚೂ ಶೋಧ ನಡೆಸುತ್ತಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ. 
ಲಾಲು ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ, ಪುತ್ರ ಬಿಹಾರ ಡಿಸಿಎಂ ತೇಜಸ್ವಿ, ಎಂಡಿ. ಪಿ.ಕೆ. ಗೋಯಲ್, ಲಾಲೂ ಅವರ ಆಪ್ತ ಗೆಳೆಯ ಪ್ರೇಮ್ ಚಂದ್ರ ಗುಪ್ತಾ ಪತ್ನಿ ಸುಜಾತಾ ಮತ್ತಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ಅಧಿಕಾರಿಗಳು ಏಕಕಾಲದಲ್ಲಿ ದೆಹಲಿ, ಪಾಟ್ನಾ, ರಾಂಚಿ, ಪುರಿ, ಗುರ್ ಗಾಂವ್ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. 
2006ರಲ್ಲಿ ಬಿಎನ್ ಆರ್ ಹೋಟೆಲ್ ಗಳ ನಿರ್ವಹಣೆಗೆ ಸುಜಾತಾ ಹೋಟೆಲ್ ಗಳಿಗೆ ನೀಡಿದ್ದ ಗುತ್ತಿಗಯಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪ ಲಾಲೂ ಪ್ರಸಾದ್ ವಿರುದ್ದ ಕೇಳಿ ಬಂದಿತ್ತು. ಸುಜಾತಾ ಹೋಟೆಲೆ ಗಳನ್ನು ಐಆರ್ ಸಿಟಿಸಿ ಮತ್ತು ಸಾರ್ವಜನಿಕ ರೈಲ್ವೇ ಇಲಾಖೆ ಪ್ರಸಕ್ತ ವರ್ಷಾರಂಭದಲ್ಲಿ ತನ್ನ ಅಧೀನಕ್ಕೆ ಪಡೆದುಕೊಂಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.