ಬುರ್ಹಾನ್ ವನಿ ಜೊತೆ ಮಾತುಕತೆ ನಡೆಸಿ, ಆತನನ್ನು ಉಳಿಸುತ್ತಿದ್ದೆ: ಕಾಂಗ್ರೆಸ್ ನಾಯಕ
ಬುರ್ಹಾನ್ ವನಿಯನ್ನು ಭಾರತೀಯ ಸೇನಾ ಪಡೆ ಸಿಬ್ಬಂದಿಗಳು ಹೊಡೆದುರುಳಿಸಿ ಒಂದು ವರ್ಷ ಕಳೆದಿದ್ದರೂ ಆತನ ವಿಷಯವಾಗಿ ವಿವಾದಗಳು ಮುಂದುವರೆದಿದ್ದು, ಕಾಂಗ್ರೆಸ್ ನಾಯಕರೊಬ್ಬರು ನೀಡಿರುವ ಹೇಳಿಕೆ...

Published On :
ನವದೆಹಲಿ: ಬುರ್ಹಾನ್ ವನಿಯನ್ನು ಭಾರತೀಯ ಸೇನಾ ಪಡೆ ಸಿಬ್ಬಂದಿಗಳು ಹೊಡೆದುರುಳಿಸಿ ಒಂದು ವರ್ಷ ಕಳೆದಿದ್ದರೂ ಆತನ ವಿಷಯವಾಗಿ ವಿವಾದಗಳು ಮುಂದುವರೆದಿದ್ದು, ಕಾಂಗ್ರೆಸ್ ನಾಯಕರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಬಿರ್ಹಾನ್ ವನಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೋಜ್, ಬುರ್ಹನ್ ವನಿ ಪ್ರಕರಣದಲ್ಲಿ ನನಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದ್ದಿದ್ದರೆ, ಆತನನ್ನು ಹತ್ಯೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಬದಲಾಗಿ ಮಾತುಕತೆ ನಡೆಸಿ, ಆತನನ್ನು ಉಳಿಸುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದನಾಗಿರುವ ಸೈಫುದ್ದೀನ್ ಸೋಜ್ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಬುರ್ಹಾನ್ ವನಿಯನ್ನು 2016 ರ ಜುಲೈ 8 ರಂದು ಭದ್ರತಾ ಪಡೆ ಸಿಬ್ಬಂದಿಗಳು ಹೊಡೆದುರುಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


