ಉತ್ತರ ಪ್ರದೇಶ: ಅಖಿಲೇಶ್ ಯಾದವ್ ಸೈಕಲ್ ಟ್ರ್ಯಾಕ್ ತೆಗೆಸಲು ಯೋಗಿ ಸರ್ಕಾರದ ನಿರ್ಧಾರ
: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಾಜವಾದಿ ಪಕ್ಷದ ಹಲವು ಯೋಜನೆಗಳ ಹೆಸರನ್ನು ಬದಲಾಯಿಸಿತ್ತು. ಈಗ ರಸ್ತೆಗಳ ಮೇಲೆ ಗಮನ ಹರಿಸಿರುವ ...

Published On :
ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಾಜವಾದಿ ಪಕ್ಷದ ಹಲವು ಯೋಜನೆಗಳ ಹೆಸರನ್ನು ಬದಲಾಯಿಸಿತ್ತು. ಈಗ ರಸ್ತೆಗಳ ಮೇಲೆ ಗಮನ ಹರಿಸಿರುವ ನಗರಾಭಿವೃದ್ಧಿ ಇಲಾಖೆ, ರಸ್ತೆಗಳ ಮೇಲಿರುವ ಸಮಾಜವಾದಿ ಪಕ್ಷದ ಸಂಕೇತವಾಗಿರುವ ಸೈಕಲ್ ಟ್ರ್ಯಾಕ್ ತೆಗೆಸಲು ನಿರ್ಧರಿಸಿದೆ.
ಲಕ್ನೋ, ನೋಯ್ಡಾ, ರಾಯ್ ಬರೇಲಿ, ಸೇರಿದಂತೆ ಉತ್ತರ ಪ್ರದೇಶದ ಎಲ್ಲಾ ನಗರ ವ್ಯಾಪ್ತಿಗೆ ಬರುವ ರಸ್ತೆಗಳ ಮೇಲಿನ ಸೈಕಲ್ ಟ್ರ್ಯಾಕ್ ತೆಗೆಸಲಾಗುವುದು.ಈ ಮೊದಲು ಸರ್ಕಾರ ಹಲವು ಯೋಜನೆಗಳಿಗೆ ಸಮಾಜವಾದಿ ಯೋಜನ ಎಂಬ ಹೆಸರಿಡಲಾಗಿತ್ತು, ಅದನ್ನು ಬದಲಾಯಿಸಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಎಂಬುದಾಗಿ ಬದಲಾವಣೆ ಮಾಡಲಾಗಿತ್ತು.
ಸೈಕಲ್ ಟ್ರ್ಯಾಕ್ ಯೋಜನೆಯನ್ನು ಕಳೆದ ವರ್ಷ ಆರಂಭಿಸಿ ಚುನಾವಣೆ ವೇಳೆಗೆ ಮುಕ್ತಾಯಗೊಳಿಸಲಾಗಿತ್ತು. ಮುನಿಸಿಪಲ್ ಕಾರ್ಪೋರೇಷನ್ ಮತ್ತು ಮುನಿಸಿಪಾಲಿಟಿಗಳಿಗೆ ಸೈಕಲ್ ಟ್ರ್ಯಾಕ್ ತೆಗೆಸುವಂತೆ ಆದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಕನ್ನಾ ಹೇಳಿದ್ದಾರೆ.
ಸೈಕಲ್ ಟ್ರ್ಯಾಕ್ ನಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ ಎಂದು ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಸೈಕಲ್ ಟ್ರ್ಯಾಕ್ ತೆಗೆಸಲಾಗುತ್ತಿದೆ. ಬರೈಲಿಯಿಂದ ಇದನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರ ಪ್ರದೇಶAkhilesh Yadavಅಖಿಲೇಶ್ ಯಾದವ್ಯೋಗಿ ಆದಿತ್ಯನಾಥ್Yogi Adithyanathcycle tracksಸೈಕಲ್ ಟ್ರ್ಯಾಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


