ನೋಟು ನಿಷೇಧ ಬಳಿಕ ಡಿಜಿಟಲ್ ಪಾವತಿಯಲ್ಲಿ ಗಣನೀಯ ಏರಿಕೆ: ನೀತಿ ಆಯೋಗ
2016-17ನೇ ಸಾಲಿನಲ್ಲಿ ಡಿಜಿಟಲ್ ಪಾವತಿ ಪ್ರಮಾಣದಲ್ಲಿ ಶೇ.55ರಷ್ಟು ಏರಿಕೆಯಾಗಿದೆ ಎಂದು ನೀತಿ ಆಯೋಗದ ಪ್ರಧಾನ ಸಲಹೆಗಾರ ರತನ್ ಪಿ ವಾಟಲ್ ಹೇಳಿದ್ದಾರೆ.

ನವದೆಹಲಿ: 2016-17ನೇ ಸಾಲಿನಲ್ಲಿ ಡಿಜಿಟಲ್ ಪಾವತಿ ಪ್ರಮಾಣದಲ್ಲಿ ಶೇ.55ರಷ್ಟು ಏರಿಕೆಯಾಗಿದೆ ಎಂದು ನೀತಿ ಆಯೋಗದ ಪ್ರಧಾನ ಸಲಹೆಗಾರ ರತನ್ ಪಿ ವಾಟಲ್ ಹೇಳಿದ್ದಾರೆ.
ಎಫ್ಐಸಿಸಿಐ ಆಯೋಜಿಸಿದ್ದ 'ಡಿಜಿಟಲ್ ಪಾವತಿ - ಟ್ರೆಂಡ್ ಗಳು, ಸಮಸ್ಯೆಗಳು ಮತ್ತು ಸವಾಲುಗಳು' ಎಂಬ ವಿಚಾರದ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ನೀತಿ ಆಯೋಗದ ಪ್ರಧಾನ ಸಲಹೆಗಾರ ರತನ್ ಪಿ ವಾಟಲ್ ಅವರು, "ನೋಟು ನಿಷೇಧ ಬಳಿಕ ಡಿಜಿಟಲ್ ಪಾವತಿ ಪ್ರಮಾಣ ಹೆಚ್ಚಾಗಿದ್ದು, ನೋಟು ನಿಷೇಧವಾದ ಒಂದೇ ವರ್ಷದಲ್ಲಿ ಡಿಜಿಟಲ್ ಪಾವತಿ ಪ್ರಮಾಣದಲ್ಲಿ ಶೇ.28ರಷ್ಟು ಏರಿಕೆಯಾಗಿದೆ" ಎಂದು ಹೇಳಿದರು.
ಪ್ರಮುಖವಾಗಿ ಈ ಬೆಳವಣಿಗೆಗೆ ಕೇಂದ್ರ ಸರ್ಕಾರದ ನೋಟು ನಿಷೇಧ ಜಾರಿ ಕಾರಣವಾಗಿದ್ದು, ನೋಟು ನಿಷೇಧದ ಬಳಿಕ ಡಿಜಿಟಲ್ ಪಾವತಿ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದ್ದು, 2016-17ನೇ ಸಾಲಿನಲ್ಲಿ ಈ ಪ್ರಮಾಣದಲ್ಲಿ ಶೇ.28ರಷ್ಟು ಏರಿಕೆ ಕಂಡುಬಂದಿದೆ. ಅಂತೆಯೇ ನೋಟು ನಿಷೇಧದ ಬಳಿಕ ಬಂದ ಡಿಜಿಟಲ್ ಪಾವತಿಗಳ ಕುರಿತ ತಂತ್ರಜ್ಞಾನ ಮತ್ತು ಆ್ಯಪ್ ಗಳ ಪಾಲು ಕೂಡ ಇದರಲ್ಲಿ ಸೇರಿದೆ. ಇದೇ ಸಂದರ್ಭದಲ್ಲೇ ಜಿಎಸ್ ಟಿ ಕೂಡ ಜಾರಿಯಾಗಿರುವುದರಿಂದ ಡಿಜಿಟಲ್ ಪಾವತಿ ಪ್ರಮಾಣ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಹುಟ್ಟಿಸಿದೆ ಎಂದು ರತನ್ ಅವರು ಅಭಿಪ್ರಾಯಪಟ್ಟರು.
ನೀತಿ ಆಯೋಗದ ವಿಶ್ಲೇಷಣೆಯ ದತ್ತಾಂಶಗಳ ಪ್ರಕಾರ ಡಿಜಿಟಲ್ ಪಾವತಿಯಲ್ಲಿ ಶೇ.24ರಷ್ಟು ಅಭಿವೃದ್ಧಿ ಕಂಡುಬರುತ್ತಿದ್ದು, ನಿಜಕ್ಕೂ ಇದು ಆಶಾದಾಯಕ ಬೆಳವಣಿಗೆಯಾಗಿದೆ. ಭಾರತದಲ್ಲಿ ನಿಜಕ್ಕೂ ಡಿಜಿಟಲ್ ಪಾವತಿಯ ಕ್ರಾಂತಿಯಾಗುತ್ತಿದೆ. ಆಧುನಿಕ ತಂತ್ರಜ್ಞಾನ ಹಾಗೂ ಗ್ರಾಹಕ ಸ್ನೇಹಿ ಆ್ಯಪ್ ಸೇವೆಗಳು, ಡಿಜಿಟಲ್ ಪಾವತಿ ಕುರಿತಂತೆ ಜನರಲ್ಲಿ ನಂಬಿಕ ಭಾವನೆ ಮೂಡಿಸುತ್ತಿದೆ. ಇದೇ ಸಕಾರಾತ್ಮಕ ಬೆಳವಣಿಗೆ ಮುಂದುವರೆದರೆ ಖಂಡಿತಾ ಡಿಜಿಟಲ್ ಪಾವತಿ ಕುರಿತಂತೆ ನಾವು ನಮ್ಮ ಗುರಿಯನ್ನು ತಲುಪಬಹುದು ಎಂದು ರತನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


