ದೇಶ

ಕೇರಳ: 83 ಜನರಿಗೆ ವಂಚಿಸಿದ್ದ 21 ವರ್ಷದ ಯುವತಿ ಪೊಲೀಸರ ಬಲೆಗೆ

ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ 83 ಮಂದಿಗೆ ವಂಚಿಸಿದ ಆರೋಪದಲ್ಲಿ 21 ವರ್ಷದ ಯುವತಿಯನ್ನು ಪೊಲೀಸರು...

ಕೇರಳ: 83 ಜನರಿಗೆ ವಂಚಿಸಿದ್ದ 21 ವರ್ಷದ ಯುವತಿ ಪೊಲೀಸರ ಬಲೆಗೆ
ಬಂಧಿತ ಯುವತಿ ಕೃಷ್ಣೇಂದು
Published On :
ಕೊಚ್ಚಿ: ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ 83 ಮಂದಿಗೆ ವಂಚಿಸಿದ ಆರೋಪದಲ್ಲಿ 21 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಗಲ್ಫ್ ದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ 83 ಮಂದಿಯಿಂದು ಸುಮಾರು 45 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ ಆರೋಪದಲ್ಲಿ, ಕೇರಳದ ತ್ರಿಶೂರ್ ಮೂಲದ ಕೃಷ್ಣೆಂದು ಹಾಗೂ ಆಕೆಯ ಸಹವರ್ತಿ ಜಿನ್ಸನ್ (27) ಎಂಬುರವನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.
ಉದ್ಯೋಗ ಕೊಡಿಸುವುದಾಗಿ ಹೇಳಿ 83 ಮಂದಿಯಿಂದ ಬರೋಬ್ಬರಿ 45 ಲಕ್ಷ ರೂಪಾಯಿ ಪಡೆದುಕೊಂಡು ಯಾರೊಬ್ಬರಿಗೂ ಕೆಲಸ ಕೊಡಿಸಿಲ್ಲ.  ಜಿನ್ಸನ್‌ ಜ್ಯುವೆಲ್ಲರಿ ಶಾಪ್ ವೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಕೃಷ್ಣೆಂದು ಕಂಪನಿಯೊಂದರಲ್ಲಿ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾಳೆ.
ಫೇಸ್‌ಬುಕ್‌ ಮೂಲಕ  ಉದ್ಯೋಗಾಕಾಂಕ್ಷಿಗಳನ್ನು ಬಲೆಗೆ ಹಾಕಿಕೊಂಡು, ಗಲ್ಫ್ ದೇಶಗಳಲ್ಲಿ ಉತ್ತಮ ಸಂಬಳದ ಉದ್ಯೋಗಗಳ ಆಮಿಷ ತೊರಿಸಿ ಪ್ರತಿಯೊಬ್ಬರಿಂದ 53,000 ರೂಪಾಯಿಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಳು ಎಂದು  ಪೊಲೀಸರು ತಿಳಿಸಿದ್ದಾರೆ.
ಒಟ್ಟು 83 ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ಅವರಿಗೆ ಕೆಲಸ ಸಿಗದ ವೇಳೆ ತಾವು ಮೋಸ ಹೋದ ಬಗ್ಗೆ ಅರಿವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. 
ಉದ್ಯೋಗದ ನೆಪದಲ್ಲಿ ಆಕೆಗೆ ಕರೆ ಮಾಡಿದ ಪೊಲೀಸರು ನಗದು ಹಣವನ್ನು ಖುದ್ದಾಗಿ ಬಂದು ಸಂಗ್ರಹಿಸುವಂತೆ ಹೇಳಿ ಠಾಣೆಗೆ ಕರೆಸಿಕೊಂಡ ಪೊಲೀಸರು ನಂತರ ಆಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.