ಸೇನೆ ಕುರಿತು ಹೇಳಿಕೆ: ಅಜಂಖಾನ್ ಮಾನಸಿಕ ಸೀಮಿತ ಕಳೆದುಕೊಂಡಿದ್ದಾರೆ- ಶಿವಸೇನೆ
ಭಾರತೀಯ ಯೋಧರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಮಾನಸಿಕ ಸೀಮಿತವನ್ನು ಕಳೆದುಕೊಂಡಿದ್ದಾರೆಂದು...

Published On :
ಮುಂಬೈ: ಭಾರತೀಯ ಯೋಧರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಮಾನಸಿಕ ಸೀಮಿತವನ್ನು ಕಳೆದುಕೊಂಡಿದ್ದಾರೆಂದು ಶಿವಸೇನೆ ಭಾನುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕ ಮನೀಷಾ ಕಯಾಂಡೆಯವರು, ಅಜಂಖಾನ್ ಅವರು ತಮ್ಮ ಮಾನಸಿಕ ಸೀಮಿತವನ್ನು ಕಳೆದುಕೊಂಡಿದ್ದು, ರಾಷ್ಟ್ರದ ವಿರುದ್ಧ, ಸೇನೆಯ ವಿರುದ್ದ ಮಾತನಾಡುತ್ತಿದ್ದಾರೆ. ಅಲ್ಲದೆ, ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.
ದೇಶದ ವಿರುದ್ಧ, ಸೇನೆಯ ವಿರುದ್ಧ ಹೇಳಿಕೆ ನೀಡುತ್ತಿರುವ ಅಜಂಖಾನ್ ಅವರನ್ನು ಮೊದಲು ಬಂಧಿಸಬೇಕು. ಶಿಕ್ಷೆಗೊಳಪಡುವಂತೆ ಮಾಡಬೇಕೆಂದು ತಿಳಿಸಿದ್ದಾರೆ.
ಇತ್ತೀಚೆಗೆ ರಾಮ್‌ಪುರದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಅಜಂ ಖಾನ್, ‘ಕೆಲವು ಪ್ರದೇಶಗಳಲ್ಲಿ ಮಹಿಳೆಯರು ಯೋಧರ ಮರ್ಮಾಂಗ ಕತ್ತರಿಸುತ್ತಿದ್ದಾರೆ. ಕಾಶ್ಮೀರ, ತ್ರಿಪುರಾ, ಜಾರ್ಖಂಡ್, ಬಂಗಾಳ ಮತ್ತಿತರ ಕಡೆಗಳಲ್ಲಿ ಅವಮಾನಕರ ಹಿಂಸೆ ನಡೆಯುತ್ತಿದೆ. ಯಾವುದರಿಂದ ಮಹಿಳೆಯರಿಗೆ ತೊಂದರೆ ಆಗುತ್ತಿದೆಯೋ ಅದನ್ನು ಅವರು ಕತ್ತರಿಸುತ್ತಿದ್ದಾರೆ. ಭಾರತಕ್ಕೆ ನಾಚಿಕೆಯಾಗಬೇಕು. ವಿಶ್ವವನ್ನು ಭಾರತ ಯಾವ ಮುಖದಿಂದ ನೋಡುತ್ತದೆ ಎಂದು ಆರೋಪಿಸುವ ಮೂಲಕ ಯೋಧರು ಅತ್ಯಾಚಾರಿಗಳು ಎಂದು ದೂಷಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


