ಈ ವರ್ಷ ಕಲ್ಲು ತೂರಾಟ ಘಟನೆಗಳು ಕಡಿಮೆಯಾಗಿವೆ: ಸಿಆರ್ ಪಿಎಫ್ ಡಿಜಿ
ಕಾಶ್ಮೀರ ಕಣಿವೆಯಲ್ಲಿ ಈ ವರ್ಷ ಕಲ್ಲುತೂರಾಟದ ಘಟನೆಗಳು ಕಡಿಮೆಯಾಗಿವೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಡಿಜಿ ರಾಜೀವ್ ರೈ ಭಟ್ನಾಗರ್ ಹೇಳಿದ್ದಾರೆ.

Published On :
ಜಮ್ಮು-ಕಾಶ್ಮೀರ: ಕಾಶ್ಮೀರ ಕಣಿವೆಯಲ್ಲಿ ಈ ವರ್ಷ ಕಲ್ಲುತೂರಾಟದ ಘಟನೆಗಳು ಕಡಿಮೆಯಾಗಿವೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಡಿಜಿ ರಾಜೀವ್ ರೈ ಭಟ್ನಾಗರ್ ಹೇಳಿದ್ದಾರೆ.
ದಿ ಹಿಂದು ಈ ಬಗ್ಗೆ ವರದಿ ಪ್ರಕಟಿಸಿದ್ದು, ಕಳೆದ ವರ್ಷ ಕಲ್ಲುತೂರಾಟ ನಡೆದಿದ್ದ 1,600 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ವರ್ಷ ಅದರ ಅರ್ಧದಷ್ಟು ಪ್ರಕರಣಗಳಷ್ಟೇ ಬೆಳಕಿಗೆ ಬಂದಿದ್ದು 700 ಪ್ರಕರಣಗಳು ದಾಖಲಾಗಿವೆ, ಕೆಲವೊಂದು ದಿನ ಕಲ್ಲು ತೂರಾಟ ನಡೆಯದೇ ಇರುವ ಉದಾಹರಣೆಗಳೂ ಇವೆ ಎಂದು ರಾಜೀವ್ ರೈ ಭಟ್ನಾಗರ್ ಹೇಳಿದ್ದಾರೆ.
ಕಲ್ಲು ತೂರಾಟ ನಡೆದಿರುವುದರಿಂದ ಯಾವುದೇ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಸ್ಥಗಿತಗೊಂಡಿಲ್ಲ, ಪೊಲೀಸ್, ಭದ್ರತಾ ಸಿಬ್ಬಂದಿಗಳು ಸಾಕಷ್ಟು ಪ್ರತಿರೋಧವೊಡ್ಡಿದ್ದು ಗಲಭೆ ನಡೆಸಲು ಅವಕಾಶ ನೀಡಿಲ್ಲ, ಯಾವುದೇ ಹಾನಿಕಾರಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡದೇ ನಮ್ಮ ಕಾರ್ಯಾಚರಣೆಯ ವಿಧಾನವನ್ನು ಬದಲಾವಣೆ ಮಾಡಿಕೊಂಡಿದ್ದೇವೆ ಎಂದು ರಾಜೀವ್ ರೈ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


