18 ನೇ ಬಾರಿಯೂ ಜಾಧವ್ ಗೆ ರಾಯಭಾರಿ ಕಚೇರಿ ಸಂಪರ್ಕ ಕಲ್ಪಿಸಲು ಪಾಕಿಸ್ತಾನ ನಿರಾಕರಣೆ
ಗೂಢಾಚಾರನೆಂದು ಆರೋಪಿಸಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿರುವ ಪಾಕಿಸ್ತಾನ ಬಂಧಿತ ಮಾಜಿ ಅಧಿಕಾರಿಗೆ ರಾಯಭಾರಿ ಕಚೇರಿ ಸಂಪರ್ಕ ಕಲ್ಪಿಸಲು 18...

Published On :
ನವದೆಹಲಿ: ಗೂಢಾಚಾರನೆಂದು ಆರೋಪಿಸಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿರುವ ಪಾಕಿಸ್ತಾನ ಬಂಧಿತ ಮಾಜಿ ಅಧಿಕಾರಿಗೆ ರಾಯಭಾರಿ ಕಚೇರಿ ಸಂಪರ್ಕ ಕಲ್ಪಿಸಲು 18 ನೇ ಬಾರಿಯೂ ನಿರಾಕರಿಸಿದೆ.
ಕುಲಭೂಷಣ್ ಜಾಧವ್ ಗೆ ರಾಯಭಾರಿ ಕಚೇರಿ ಸಂಪರ್ಕ ಕಲ್ಪಿಸಲು ಭಾರತ ಸರ್ಕಾರ ಜು.1 ರಂದು ಪಾಕಿಸ್ತಾನಕ್ಕೆ ಮನವಿ ಸಲ್ಲಿಸಿತ್ತು. ಆದರೆ ಪಾಕಿಸ್ತಾನ ಭಾರತದ ವಿರುದ್ಧ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ ಆರೋಪ ಮಾಡಿದ್ದು, ರಾಯಭಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.
ಭಾರತೀಯ ಇಂಜಿನಿಯರ್ ಹಾಗೂ ಉದ್ಯಮಿಯಾಗಿರುವ ಹಮೀದ್ ನೆಹಾಲ್ ಅನ್ಸಾರಿಯನ್ನೂ ಸಹ ಪಾಕಿಸ್ತಾನ ಗಡಿ ದಾಟಿದ ಆರೋಪದಡಿ ಬಂಧಿಸಿದ್ದು, ಅನ್ಸಾರಿ, ಜಾಧವ್ ಸೇರಿದಂತೆ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಭಾರತೀಯರಿಗೆ ರಾಯಭಾರಿ ಕಚೇರಿ ಪ್ರವೇಶ ನೀಡುವಂತೆ ಭಾರತ ಸರ್ಕಾರ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಪಾಕಿಸ್ತಾನ ಸರ್ಕಾರ ರಾಯಭಾರಿ ಕಚೇರಿ ಸಂಪರ್ಕ ಕಲ್ಪಿಸಲು ನಿರಾಕರಿಸಿದೆ. ಈ ಮೂಲಕ 18 ನೇ ಬಾರಿಯೂ ಭಾರತ ಸರ್ಕಾರದ ಮನವಿಗೆ ಪಾಕಿಸ್ತಾನ ನಿರಾಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


